11th International Yoga Day Celebration in RVK – Kalaburagi

Kalaburagi, June 21: The 11th International Yoga Day was celebrated herein Rashtrotthana Vidya Kendra – Kalaburagi.
Dr. Nirmala Kelamani, Principal of Hingulambika Ayurvedic College, who arrived as the chief guest for the program, spoke and said that Yoga has a positive effect on both the body and the mind. Yoga is the greatest gift given to the world by Indian sages. The world today is accepting and following the practice of Yoga. We all should do Yoga every day to become physically and mentally strong. Through this, we can lead a healthy life, he said.
Several yoga postures were performed by school children.
Yoga teacher Sri Manjunatha Math read the annual report.

ಕಲಬುರಗಿ, ಜೂ. ೨೧: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಕಲಬುರಗಿಯಲ್ಲಿ 11ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಹಿಂಗುಲಾಂಬಿಕ ಆಯುರ್ವೇದಿಕ್ ಕಾಲೇಜಿನ ಮುಖ್ಯಸ್ಥರಾದ ಡಾ. ನಿರ್ಮಲ ಕೆಳಮನಿಯವರು ಮಾತನಾಡುತ್ತಾ, ಯೋಗವು ದೇಹ ಮತ್ತು ಮನಸ್ಸು ಎರಡರ ಮೇಲು ಸಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಯೋಗವು ಭಾರತೀಯ ಋಷಿಮುನಿಗಳು ಜಗತ್ತಿಗೆ ನೀಡಿದ ಬಹುದೊಡ್ಡ ಕೊಡುಗೆಯಾಗಿದೆ. ಜಗತ್ತು ಈವತ್ತು ಯೋಗ ಪದ್ದತಿಯನ್ನು ಒಪ್ಪಿಕೊಂಡು ಅನುಸರಿಸುತ್ತಿದೆ. ನಾವೆಲ್ಲರೂ ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಲು ಪ್ರತಿದಿನವೂ ಯೋಗವನ್ನು ಮಾಡಬೇಕು. ಆ ಮೂಲಕ ಆರೋಗ್ಯವಾದ ಜೀವನ ನಡೆಸಬಹುದಾಗಿದೆ ಎಂದು ಹೇಳಿದರು.
ಶಾಲೆ ಮಕ್ಕಳು ಯೋಗದ ಹಲವು ಭಂಗಿಗಳನ್ನು ಪ್ರದರ್ಶನ ಮಾಡಿದರು.
ಯೋಗ ಶಿಕ್ಷಕರಾದ ಶ್ರೀ ಮಂಜುನಾಥ ಮಠ ಅವರು ವಾರ್ಷಿಕ ವರದಿಯನ್ನು ಓದಿದರು.

Scroll to Top