76th Republic Day Celebration in RVK – Kalaburagi

Kalaburgi, Jan. 26: The 76th Republic Day was celebrated herein Rashtrotthana Vidya Kendra – Kalaburagi. Sri Prahlad Naldurgakar, a retired warrant officer of the Indian Air Force, who arrived as the guest of the program after hoisting the flag, spoke and said that 76 years have passed since the implementation of the Constitution. The right direction for running the country has been provided by the Constitution. We should remember the soldiers and farmers at least once a day. He called for consciously fulfilling our civic duties along with protecting the nation. Then Sri Krishna Joshi, who took over the presidency of the program, spoke and remembered the great men who fought for freedom. He spoke about the rights and duties written in the Constitution. He said that only if India becomes powerful, the world can be protected, otherwise the survival of the world is impossible; because only India wants world peace. Children presented dance, art, karate, yoga and cultural programs at the program.

ಕಲಬುರ್ಗಿ, ಜ. 26: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಕಲಬುರಗಿಯಲ್ಲಿ 76ನೇ ಗಣರಾಜೋತ್ಸವವನ್ನು ಆಚರಿಸಲಾಯಿತು. ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಕಾರ್ಯಕ್ರಮದ ಅತಿಥಿಗಳಾಗಿ ಆಗಮಿಸಿದ ಭಾರತೀಯ ವಾಯು ಸೇನೆಯ ನಿವೃತ್ತ ವಾರೆಂಟ್ ಆಫೀಸರ್ ಶ್ರೀ ಪ್ರಹ್ಲಾದ ನಳದುರ್ಗಕರ್ ರವರು ಮಾತನಾಡುತ್ತಾ, ಸಂವಿಧಾನ ಜಾರಿಗೆಯಾಗಿ 76 ವರ್ಷಗಳು ಸಂದಿವೆ. ದೇಶನಡೆಸಲು ಸರಿಯಾದ ದಿಶೆ ಸಂವಿಧಾನದಿಂದ ದೊರಕಿದೆ. ಸೈನಿಕರನ್ನು ಹಾಗೂ ರೈತರನ್ನು ದಿನಕ್ಕೊಮ್ಮೆಯಾದರೂ ನೆನಪಿಸಿಕೊಳ್ಳಬೇಕು. ರಾಷ್ಟ್ರದ ರಕ್ಷಣೆಯ ಜೊತೆಗೆ, ನಮ್ಮ ನಾಗರಿಕ ಕರ್ತವ್ಯಗಳನ್ನು ಪ್ರಜ್ಞಾಪೂರ್ವಕವಾಗಿ ಪಾಲಿಸಬೇಕು ಎಂದು ಕರೆನೀಡಿದರು. ನಂತರ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿದ ಶ್ರೀ ಕೃಷ್ಣ ಜೋಶಿ ಅವರು ಮಾತನಾಡಿ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರನ್ನು ಸ್ಮರಿಸಿದರು. ಸಂವಿಧಾನದಲ್ಲಿ ಬರೆದ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ತಿಳಿಸಿದರು. ಭಾರತ ಶಕ್ತಿಶಾಲಿಯಾದರೆ ಮಾತ್ರ ವಿಶ್ವದ ರಕ್ಷಣೆ ಸಾಧ್ಯ ಇಲ್ಲವಾದಲ್ಲಿ ವಿಶ್ವದ ಉಳಿವು ಅಸಾಧ್ಯ; ಏಕೆಂದರೆ ಭಾರತ ಮಾತ್ರ ವಿಶ್ವಶಾಂತಿ ಬಯಸುತ್ತದೆ ಎಂದು ತಿಳಿಸಿದರು.  ಕಾರ್ಯಕ್ರಮದಲ್ಲಿ ಮಕ್ಕಳು ನೃತ್ಯ, ಕಲಾ, ಕರಾಟೆ, ಯೋಗ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದರು.

Scroll to Top