Kalaburagi, Dec. 12: Geeta Jayanti was celebrated herein Rashtrotthana Vidya Kendra – Kalaburagi. Smt. Shweta Patil said that, Bhagavad Gita gives us a vision of Arjuna and Lord Krishna in the form of conversation. Bhagavad Gita empowers all human beings irrespective of caste, creed, nationality to understand each and every meaning of them. She explained the principle and importance of Bhagavad Gita in the meaning of life that Bhagavad Gita is the words from the mouth of God and is still studied and practiced in most parts of the world. Bhagavad Gita was recited in the school for seven days. Smt. Gopika Dandoti of Gangapur, the custodian of the school, conducted the recitation. Children disguised as Arjuna and Sri Krishna recited the Shloka. The program concluded with mass Bhagavad Gita chanting and Geeta Aarti.
ಕಲಬುರ್ಗಿ, ಡಿ. 12: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಕಲಬುರಗಿಯಲ್ಲಿ ಗೀತಾಜಯಂತಿಯನ್ನು ಆಚರಿಸಲಾಯಿತು. ಶ್ರೀಮತಿ ಶ್ವೇತಾ ಪಾಟೀಲ್ ಅವರು, ಭಗವದ್ಗೀತೆಯು ಅರ್ಜುನ ಮತ್ತು ಶ್ರೀಕೃಷ್ಣನ ಸಂವಾದದ ರೂಪದಲ್ಲಿ ನಮಗೆ ದರ್ಶನವನ್ನು ನೀಡುತ್ತದೆ. ಭಗವದ್ಗೀತೆಯು ಜಾತಿ, ಧರ್ಮ, ರಾಷ್ಟ್ರಭೇದವಿಲ್ಲದೇ ಎಲ್ಲ ಮನುಷ್ಯರಿಗೂ ಅವುಗಳಲ್ಲಿ ಒಂದೊಂದು ಅರ್ಥವನ್ನು ತಿಳಿಯುವ ಸಾಮರ್ಥ್ಯವನ್ನು ನೀಡುತ್ತದೆ. ಭಗವದ್ಗೀತೆಯು ದೇವರ ಬಾಯಿಂದ ಬಂದ ನುಡಿಗಳಾಗಿದ್ದು, ಇಂದಿಗೂ ವಿಶ್ವದ ಬಹುಭಾಗದಲ್ಲಿ ಅಧ್ಯಯನ ಮತ್ತು ಅಭ್ಯಾಸಕ್ಕೆ ಒಳಪಟ್ಟಿದೆ ಎಂದು ಜೀವನದ ಸಾರ್ಥಕತೆಯಲ್ಲಿ ಭಗವದ್ಗೀತೆಯ ತತ್ತ್ವ ಹಾಗೂ ಮಹತ್ತ್ವವನ್ನು ವಿವರಿಸಿದರು. ಶಾಲೆಯಲ್ಲಿ ಭಗವದ್ಗೀತೆಯ ಪಾರಾಯಣವು ಏಳು ದಿನಗಳವರೆಗೆ ನಡೆಯಿತು. ಶಾಲೆಯ ಪಾಲಕರಾದ ಗಾಣಗಾಪುರದ ಶ್ರೀಮತಿ ಗೋಪಿಕಾ ದಂಡೋತಿಯವರು ಪಾರಾಯಣವನ್ನು ನಡೆಸಿಕೊಟ್ಟರು. ಅರ್ಜುನ ಮತ್ತು ಶ್ರೀ ಕೃಷ್ಣನ ಛದ್ಮವೇಷವನ್ನು ಧರಿಸಿದ ಚಿಕ್ಕಮಕ್ಕಳು ಶ್ಲೋಕವನ್ನು ಹೇಳಿದರು. ಸಾಮೂಹಿಕ ಭಗವದ್ಗೀತಾ ಪಠಣ ಹಾಗೂ ಗೀತಾ ಆರತಿಯೊಂದಿಗೆ ಕಾರ್ಯಕ್ರಮವು ಪೂರ್ಣಗೊಂಡಿತು