Kalpataru Day Celebration in RVK – Kalaburagi

Kalaburagi, Jan. 1 – Kalpataru Day was celebrated herein Rashtrotthana Vidya Kendra – Kalaburagi, Devala Gangapura Road. Sri Srikant Sharma, Sanskrit teacher of the school, speaking in the program, said that it was the day when Sri Ramakrishna Paramahansa showed his disciples with immense blessings. God gives boons only when asked. But the Guru shows his disciples with pure love. He said that if Jagadodhara was created by Rama’s avatar in Treta Yuga and Krishna’s avatar in Dwapara, then in Kali Yuga Sri Ramakrishna Paramahamsa was the amalgamation of two avatars who gave great saints like Vivekananda to our nation.

ಕಲಬುರಗಿ, ಜ. 1 – ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ – ಕಲಬುರಗಿ, ದೇವಳ ಗಾಣಗಾಪುರ ರಸ್ತೆಯಲ್ಲಿ ಕಲ್ಪತರು ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲೆಯ ಸಂಸ್ಕೃತ ಶಿಕ್ಷಕರಾದ ಶ್ರೀಕಾಂತ್ ಶರ್ಮಾ ಅವರು ಮಾತನಾಡುತ್ತಾ, ಶ್ರೀ ರಾಮಕೃಷ್ಣ ಪರಮಹಂಸರು ತಮ್ಮ ಶಿಷ್ಯ ವೃಂದಕ್ಕೆ ಅಪಾರವಾದ ಆಶೀರ್ವಾದ ವೃಷ್ಠಿಯನ್ನು ಮಾಡಿದ ದಿನ. ದೇವರು ಕೇಳಿಕೊಂಡರೆ ಮಾತ್ರ ವರಪ್ರಸಾದವನ್ನು ನೀಡುತ್ತಾನೆ. ಆದರೆ ಗುರುವು ತಮ್ಮ ಶಿಷ್ಯರ ಮೇಲೆ ನಿಷ್ಕಲ್ಮಶ ಪ್ರೇಮದ ವೃಷ್ಠಿ ಮಾಡುತ್ತಾರೆ. ತ್ರೇತಾ ಯುಗದಲ್ಲಿ ರಾಮನ ಅವತಾರದಿಂದ ಹಾಗೂ ದ್ವಾಪರದಲ್ಲಿ ಕೃಷ್ಣನ ಅವತಾರದಿಂದ ಜಗದೋದ್ಧಾರವಾದರೆ, ಕಲಿಯುಗದಲ್ಲಿ ಶ್ರೀ ರಾಮಕೃಷ್ಣ ಪರಮಹಂಸರು ಎರಡು ಅವತಾರಗಳ ಸಮ್ಮಿಲನವಾಗಿ ವಿವೇಕಾನಂದರಂತಹ ಶ್ರೇಷ್ಠ ಸಂತರನ್ನು ನಮ್ಮ ನಾಡಿಗೆ ನೀಡಿದವರು ಎಂದು ತಿಳಿಸಿದರು.

Scroll to Top