Hedgewar Jayanti & Yugadi Festival Celebration in RVK – Kalaburagi

Kalaburagi, Mar. 28: Yugadi festival and Dr. Hedgewar birthday were celebrated today herein Rashtrotthana Vidya Kendra – Kalaburagi.Sri Venkatarao Deshpande was present at the program as a guest.Speaking on the occasion, Sri Venkatarao Deshpande talked about the need for teachers to guide children and impart Sanskar. He said that the zeal, enthusiasm and desire to teach teachers by remembering the Gurukul of the past are very important. He said that the nature and desire that children should have, is the reason for their progress.On the occasion of Yugadi celebrations, Sri Shrikant Sharma, the Sanskrit teacher of the school, performed Kalash Puja and Panchanga chanting. The children and teachers performed a dance. The children and music teacher Mrityunjaya presented a song. After the Mahamangalaarti of the temple and Panchanga, prasad was distributed.

ಕಲಬುರಗಿ, ಮಾ. 28: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಕಲಬುರಗಿಯಲ್ಲಿ ಇಂದು ಯುಗಾದಿ ಹಬ್ಬ ಹಾಗೂ ಡಾ. ಹೆಡೆಗೆವಾರ್ ಜನ್ಮದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಅಭ್ಯಾಗತರಾಗಿ ಶ್ರೀ ವೆಂಕಟರಾವ್ ದೇಶಪಾಂಡೆ ಆಗಮಿಸಿದ್ದರು.ಈ ಸಂದರ್ಭದಲ್ಲಿ ಶ್ರೀ ವೆಂಕಟರಾವ್ ದೇಶಪಾಂಡೆ ಅವರು ಮಾತನಾಡುತ್ತಾ ಅಧ್ಯಾಪಕರಾದವರು ಮಕ್ಕಳಿಗೆ ಯಾವ ರೀತಿ ಮಾರ್ಗದರ್ಶನ ಮಾಡಬೇಕು ಹಾಗೂ ಸಂಸ್ಕಾರವನ್ನು ಕೊಡುವುದರ ಅಗತ್ಯತೆಯ ಬಗ್ಗೆ ತಿಳಿಸಿದರು. ಹಿಂದಿನ ಕಾಲದ ಗುರುಕುಲವನ್ನು ನೆನೆಸಿಕೊಂಡು ಶಿಕ್ಷಕರಿಗೆ ಕಲಿಸುವ ಹುರುಪು, ಹುಮ್ಮಸ್ಸು, ಕಲಿಸುವ ಇಚ್ಛೆ ತುಂಬಾ ಮುಖ್ಯ ಎಂದು ತಿಳಿಸಿದರು. ಮಕ್ಕಳಿಗೆ ಇರಬೇಕಾದ ಸ್ವಭಾವ ಹಾಗೂ ಹಂಬಲ ಅವರ ಉನ್ನತಿಗೆ ಕಾರಣ ಎಂದು ನುಡಿದರು.ಯುಗಾದಿ ಆಚರಣೆಯ ಪ್ರಯುಕ್ತ ಶಾಲೆಯ ಸಂಸ್ಕೃತ ಅಧ್ಯಾಪಕರಾದ ಶ್ರೀಕಾಂತ ಶರ್ಮ ಅವರು ಕಲಶಪೂಜೆ ಹಾಗೂ ಪಂಚಾಂಗ ಪಠಣ ಮಾಡಿದರು. ಮಕ್ಕಳು ಹಾಗೂ ಶಿಕ್ಷಕಿಯರು ನೃತ್ಯವನ್ನು ಪ್ರದರ್ಶಿಸಿದರು. ಮಕ್ಕಳು ಹಾಗೂ ಸಂಗೀತ ಶಿಕ್ಷಕರಾದ ಮೃತ್ಯುಂಜಯ ಅವರು ಹಾಡನ್ನು ಪ್ರಸ್ತುತಪಡಿಸಿದರು. ಗುಡಿಯ ಹಾಗೂ ಪಂಚಾಂಗದ ಮಹಾಮಂಗಳಾರತಿಯ ನಂತರ ಪ್ರಸಾದ ವಿತರಿಸಲಾಯಿತು.

Scroll to Top