Kalaburagi, June 5: World Environment Day was celebrated herein Rashtrotthana Vidya Kendra – Kalaburagi, Sharan Sirasagi.Sri Shivasharanappa Patil Kalaburagi, the head of Yadgir Environmental Movement, arrived as the chief guest.Chief Guest inaugurated the program by planting a tree and spoke about the balance of the environment and the importance of trees in nature, reducing plastic use, planting trees, saving water, and things that can be implemented in daily life to stay healthy. He said that the prosperity of the nation is measured by its environment and strong personality.Speaking at the program, Sri Krishna Joshi, the school correspondent, said that let us use water sparingly, plant trees and avoid plastic.Children and teachers planted trees. Then the children performed several dance songs on the environment.
ಕಲಬುರಗಿ, ಜೂ. 5: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಕಲಬುರಗಿ, ಶರಣ ಸಿರಸಗಿಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ಯಾದಗಿರಿ ಪರಿಸರ ಗತಿವಿಧಿ ಪ್ರಮುಖರಾದ ಶ್ರೀ ಶಿವಶರಣಪ್ಪ ಪಾಟೀಲ್ ಕಲಬುರಗಿ ಅವರು ಅಭ್ಯಾಗತರಾಗಿ ಆಗಮಿಸಿದ್ದರು. ಮುಖ್ಯ ಅತಿಥಿಗಳು ವೃಕ್ಷಾರೋಪಣ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು ಹಾಗೂ ಪರಿಸರದ ಸಮತೋಲನದ ಕುರಿತಾಗಿ ಹಾಗೂ ಪ್ರಕೃತಿಯಲ್ಲಿ ವೃಕ್ಷಗಳ ಮಹತ್ವ, ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವುದು, ಮರ ನೆಡುವದು, ನೀರಿನ ಉಳಿತಾಯ, ಆರೋಗ್ಯವಂತರಾಗಿರಲು ನಿತ್ಯ ಜೀವನದಲ್ಲಿ ಇವುಗಳನ್ನೆಲ್ಲ ಅಳವಡಿಸಿಕೊಳ್ಳಬಹುದಾದ ಸಂಗತಿಗಳ ಬಗ್ಗೆ ತಿಳಿಸಿದರು. ರಾಷ್ಟ್ರದ ಸಮೃದ್ಧಿಯು ಅಲ್ಲಿನ ಪರಿಸರ ಹಾಗೂ ಸದೃಢ ವ್ಯಕ್ತಿತ್ವದಿಂದ ಅಳೆಯಲ್ಪಡುತ್ತದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಶಾಲೆಯ ಕರೆಸ್ಪಾಂಡೆಂಟರಾದ ಶ್ರೀ ಕೃಷ್ಣ ಜೋಶಿ ಅವರು ನೀರನ್ನು ಮಿತವಾಗಿ ಬಳಸೋಣ, ವೃಕ್ಷಾರೋಪಣ ಮಾಡೋಣ ಹಾಗೂ ಪ್ಲಾಸ್ಟಿಕನ್ನು ವರ್ಜಿಸೋಣ ಎಂದು ತಿಳಿಸಿದರು. ಮಕ್ಕಳು ಹಾಗೂ ಶಿಕ್ಷಕರು ವೃಕ್ಷಾರೋಪಣ ಮಾಡಿದರು. ನಂತರ ಹಲವಾರು ಪರಿಸರ ಕುರಿತಾದ ನೃತ್ಯ ಗೀತೆಗಳನ್ನು ಮಕ್ಕಳು ನಡೆಸಿಕೊಟ್ಟರು.