Aksharabhyasa and Vidyarambha in RVK – Kalaburagi

Kalaburagi, May. 25: Aksharabhyasa and Vidyarambha program was
organized herein Rashtrotthana Vidya Kendra – Kalaburagi, Sharana
Sirsagi.Sri Nirbhayananda Saraswati Swami, President of Ramakrishna
Vivekananda Ashram Gadag and Vijayapura, graced the program and
taught the children the words of Vivekananda as the first lesson,
“Strength is life, weakness is death”, and called upon them to involve children in nation building. A strong India should be built in India with engineers like Visvesvaraya, personalities like Swami Vivekananda,
Subhash Chandra Bose. To make India a world guru, education is
needed to make children men. He said that in the coming days, India will
become a wonderful country and will have the power to rule the world.
And in his guiding words, Sri Krishna Joshi, correspondent of
Rashtrotthana Vidya Kendra, spoke about the Indian education system,
culture, the importance of Panchamukhi education, and the work of the
Prakalpas being done by Rashtrotthana Parishath in society. He said
that Sadhana and Tapas are providing JEE and NEET education to
economically backward children.

ಕಲಬುರಗಿ, ಮೇ. 25: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಕಲಬುರಗಿ, ಶರಣ ಸಿರಸಗಿಯಲ್ಲಿ
ಅಕ್ಷರಾಭ್ಯಾಸ ಮತ್ತು ವಿದ್ಯಾರಂಭ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ಕಾರ್ಯಕ್ರಮಕ್ಕೆ ರಾಮಕೃಷ್ಣ ವಿವೇಕಾನಂದ ಆಶ್ರಮ ಗದಗ್ ಹಾಗೂ ವಿಜಯಪುರದ ಅಧ್ಯಕ್ಷರಾದ ಶ್ರೀ
ನಿರ್ಭಯಾನಂದ ಸರಸ್ವತಿ ಸ್ವಾಮಿಗಳು ದಿವ್ಯ ಸಾನಿಧ್ಯವನ್ನು ವಹಿಸಿ “ಶಕ್ತಿಯೇ ಜೀವನ,ದೌರ್ಬಲ್ಯವೇ ಮರಣ ಎಂಬ ವಿವೇಕಾನಂದರ ವಾಣಿಯನ್ನು ಪ್ರಥಮ ಪಾಠವಾಗಿ ಮಕ್ಕಳಿಗೆ ಹೇಳಿಕೊಟ್ಟು, ರಾಷ್ಟ್ರನಿರ್ಮಾಣದಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳಬೇಕು ಎಂದು ಕರೆನೀಡಿದರು. ಸದೃಢ ಭಾರತಕ್ಕೆ ವಿಶ್ವೇಶ್ವರಯ್ಯನಂಥ ಇಂಜಿನಿಯನಿಯರ, ಸ್ವಾಮಿ ವಿವೇಕಾನಂದ, ಸುಭಾಷ್ ಚಂದ್ರ ಬೋಸ್ ರಂಥ ವ್ಯಕ್ತಿಗಳು ಭಾರತದಲ್ಲಿ ನಿರ್ಮಾಣವಾಗಬೇಕು. ಭಾರತವನ್ನು ವಿಶ್ವಗುರುವನ್ನಾಗಿಸಲು ಮಕ್ಕಳನ್ನು ಪುರುಷಸಿಂಹರನ್ನಾಗಿ ಮಾಡುವ ಶಿಕ್ಷಣ ಬೇಕು. ಮುಂದಿನ ದಿನಗಳಲ್ಲಿ ಭಾರತವು ಒಂದು ಅದ್ಭುತ ದೇಶವಾಗಿ ಜಗತ್ತನ್ನು ಆಳುವ ಶಕ್ತಿಯನ್ನು ಹೊಂದುತ್ತದೆ ಎಂದು ಹೇಳಿದರು.
ಹಾಗೂ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಕರೆಸ್ಪಾಂಡೆಂಟ್ ಶ್ರೀ ಕೃಷ್ಣ ಜೋಶಿ ಅವರು ತಮ್ಮ
ದಿಕ್ಸೂಚಿ ನುಡಿಗಳಲ್ಲಿ ಭಾರತೀಯ ಶಿಕ್ಷಣ ಪದ್ಧತಿ, ಸಂಸ್ಕಾರ, ಪಂಚಮುಖಿ ಶಿಕ್ಷಣದ ಮಹತ್ವ,
ರಾಷ್ಟ್ರೋತ್ಥಾನ ಪರಿಷತ್ ಸಮಾಜದಲ್ಲಿ ಮಾಡುತ್ತಿರುವ ಪ್ರಕಲ್ಪಗಳ ಕೆಲಸದ ಬಗ್ಗೆ ತಿಳಿಸಿದರು.
ಸಾಧನ ಹಾಗೂ ತಪಸ್ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಜೆಇಇ ಹಾಗೂ ನೀಟ್ ಶಿಕ್ಷಣ ನೀಡುತ್ತಿದೆ
ಎಂದು ತಿಳಿಸಿದರು.

Scroll to Top