Annual Day Celebration in RVK – Kalaburagi

Kalaburagi, Dec. 27: The second-year school anniversary was held herein Rashtrotthana Vidya Kendra – Kalaburagi, Devala Gangapur Road. Sri Nagaraj Kothli, a renowned doctor of the city, who arrived as the chief guest for the program, said that the survival of our society, the bright future of our children lies in the culture and education we give them. He said that time and understanding are more effective than the facilities we provide for the development of children. Sri Ranganath H. A., the educational leaders of North Karnataka Rashtrotthana CBSC Schools and the Principal of Rashtrotthana Kendra, Hagaribommanahalli, who spoke in the program said, the Rashtrothana Parishad started with publishing literature and concentrated on personal development. In this regard, in order to develop all-round children through five-faceted education, excellent model schools are being started and strides are being made, he said. The program was based on the mission “Pancha Parivartana Parva”, In this mission-based program, children presented several art performances based on our family, our country, our concern for environment, our sense of duty and social harmony.

ಕಲಬುರಗಿ, ಡಿ. 27: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಕಲಬುರಗಿ, ದೇವಳ ಗಾಣಗಾಪುರ ರಸ್ತೆಯಲ್ಲಿ ಎರಡನೇ ವರ್ಷದ ಶಾಲಾ ವಾರ್ಷಿಕೋತ್ಸವವು ಜರುಗಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ನಗರದ ಪ್ರತಿಷ್ಠಿತ ವೈದ್ಯರಾದ ಶ್ರೀ ನಾಗರಾಜ್ ಕೊತ್ಲಿ ಅವರು ಮಾತನಾಡುತ್ತಾ ನಮ್ಮ ಸಮಾಜದ ಉಳಿವು, ನಮ್ಮ ಮಕ್ಕಳ ಉಜ್ವಲ ಭವಿಷ್ಯ ನಾವು ಅವರಿಗೆ ನೀಡುವ ಸಂಸ್ಕಾರ ಹಾಗೂ ಶಿಕ್ಷಣದಲ್ಲಿ ಇದೆ. ಮಕ್ಕಳ ಬೆಳವಣಿಗೆಗೆ ನಾವು ಕೊಡುವ ಸೌಲಭ್ಯಕ್ಕಿಂತ ಸಮಯ ಹಾಗೂ ತಿಳುವಳಿಕೆಯೂ ಹೆಚ್ಚು ಪರಿಣಾಮಕಾರಿ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ದಿಕ್ಸೂಚಿ ಮಾತುಗಳನ್ನಾಡಿದ ರಾಷ್ಟ್ರೋತ್ಥಾನ ಸಿ ಬಿ ಎಸ್ ಸಿ ಶಾಲೆಗಳ ಉತ್ತರ ಕರ್ನಾಟಕದ ಶೈಕ್ಷಣಿಕ ಪ್ರಮುಖರು ಹಾಗೂ ಹಗರಿಬೊಮ್ಮನಹಳ್ಳಿಯ ರಾಷ್ಟ್ರೋತ್ಥಾನ ಕೇಂದ್ರದ ಪ್ರದಾನಾಚಾರ್ಯರಾದ ಶ್ರೀ ರಂಗನಾಥ್ ಎಚ್. ಎ. ಅವರು, ಸಾಹಿತ್ಯ ಪ್ರಕಾಶನದಿಂದ ಪ್ರಾರಂಭವಾದ ರಾಷ್ಟ್ರೋತ್ಥಾನ ಪರಿಷತ್ ವ್ಯಕ್ತಿ ನಿರ್ಮಾಣದಿಂದ ಕೈಂಕರ್ಯವನ್ನು ಕೈಗೆತ್ತಿಕೊಂಡಿತು. ಈ ನಿಟ್ಟಿನಲ್ಲಿ ಪಂಚಮುಖಿ ಶಿಕ್ಷಣದ ಮೂಲಕ ಮಕ್ಕಳ ಸರ್ವತೋಮುಖ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ, ಉತ್ಕೃಷ್ಟ ಮಾದರಿಯ ಶಾಲೆಗಳನ್ನು ಪ್ರಾರಂಭಿಸಿ ದಾಪುಗಾಲು ಇಡುತ್ತಿದೆ ಎಂದರು. ಕಾರ್ಯಕ್ರಮವು “ಪಂಚ ಪರಿವರ್ತನಾ ಪರ್ವ” ಎಂಬ ಧ್ಯೇಯ ಆಧಾರಿತವಾಗಿತ್ತು, ಮಕ್ಕಳು ಈ ಧ್ಯೇಯ ಆಧಾರಿತ ಕಾರ್ಯಕ್ರಮದಲ್ಲಿ ನಮ್ಮ ಕುಟುಂಬ, ನಮ್ಮ ದೇಶ, ಪರಿಸರದ ಬಗ್ಗೆ ನಮ್ಮ ಕಾಳಜಿ, ನಮ್ಮ ಕರ್ತವ್ಯ ಪ್ರಜ್ಞೆ ಹಾಗೂ ಸಾಮಾಜಿಕ ಸಾಮರಸ್ಯದ ಆಧಾರಿತ ಹಲವಾರು ಕಲಾಪ್ರದರ್ಶನಗಳನ್ನು ನೀಡಿದರು.

Scroll to Top