Kalaburgi, Apr. 14: Dr. Babasaheb Ambedkar Jayanti was celebrated herein Rashtrotthana Vidya Kendra – Kalaburagi. Sri Lingarajappa Appa, who arrived as a guest at the program, presented the life stories of the great humanist Dr. Babasaheb Ambedkar. We should learn from Babasaheb how to achieve by adhering to the ideology we believe in. Schools are a miniature of society. Children should be taught the lesson of living in harmony in schools themselves. We should create a feeling that Hindu society is one, he said. School correspondent Sri Krishna Joshi, who delivered the introductory remarks for the program, remembered Dr. Babasaheb Ambedkar’s contributions to society. He said that water, temples and crematoriums should be available to everyone equally, there should be no difference in this.The school principal, Sri Girish Joshi, has been continuously serving the society for 60 years. He gave a bird’s eye view of the programs and said that preparations have been made to celebrate this occasion through several programs with the school as the centrepiece on the occasion of its completion of 60 years.Speaking at the program, Smt. Sumedha Patil, President of Matru Bharati, presented the annual report of Matru Bharati programs.
ಕಲಬುರ್ಗಿ, ಏ. 14: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಕಲಬುರಗಿಯಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಅಭ್ಯಾಗತರಾಗಿ ಆಗಮಿಸಿದ ಶ್ರೀ ಲಿಂಗರಾಜಪ್ಪ ಅಪ್ಪಾ ಅವರು ಮಹಾ ಮಾನವತಾವಾದಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಜೀವನದ ಚಿತ್ರಣಗಳನ್ನು ಮೇಲಕುಹಾಕಿದರು. ನಾವು ನಂಬಿರುವ ಸಿದ್ಧಾಂತಕ್ಕೆ ಕಟಿಬದ್ಧರಾಗಿ ಸಾಧನೆ ಹೇಗೆ ಮಾಡಬೇಕು ಎಂಬ ಛಲವನ್ನು ಬಾಬಾಸಾಹೇಬರಿಂದ ಕಲಿಯಬೇಕು. ಶಾಲೆಗಳು ಸಮಾಜದ ಒಂದು ಕಿರುಚಿತ್ರಣ. ಮಕ್ಕಳಿಗೆ ಶಾಲೆಗಳಲ್ಲಿಯೇ ಸಾಮರಸ್ಯದಿಂದ ಬದುಕುವ ಪಾಠವನ್ನು ಕಲಿಸಬೇಕು. ಹಿಂದೂಸಮಾಜ ಒಂದು ಎಂಬ ಭಾವವನ್ನು ಮೂಡಿಸಬೇಕು ಎಂದು ನುಡಿದರು. ಕಾರ್ಯಕ್ರಮಕ್ಕೆ ಪ್ರಾಸ್ತಾವಿಕ ನುಡಿಗಳನ್ನಾಡಿದ ಶಾಲೆಯ ಕರೆಸ್ಪಾಂಡೆಂಟ್ ಶ್ರೀ ಕೃಷ್ಣ ಜೋಶಿಯವರು ಸಮಾಜಕ್ಕೆ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಕೊಡುಗೆಗಳನ್ನು ಸ್ಮರಿಸಿದರು. ನೀರು, ದೇವಸ್ಥಾನ ಹಾಗೂ ಸ್ಮಶಾನ ಎಲ್ಲರಿಗೂ ಸಮಾನವಾಗಿ ಸಿಗಬೇಕು, ಇದರಲ್ಲಿ ಯಾವ ಬೇಧವೂ ಇರಬಾರದು ಎಂದು ನುಡಿದರು.ಶಾಲೆಯ ಪ್ರಧಾನಾಚಾರ್ಯರಾದ ಶ್ರೀ ಗಿರೀಶ ಜೋಶಿಯವರು ರಾಷ್ಟ್ರೋತ್ಥಾನ ಪರಿಷತ್ 60 ವರ್ಷಗಳಿಂದ ನಿರಂತರ ಸಮಾಜ ಸೇವೆಯನ್ನು ಮಾಡುತ್ತಿದ್ದು. 60 ವರ್ಷ ಪೂರ್ಣಗೊಂಡಿರುವ ಸಂದರ್ಭದಲ್ಲಿ ಶಾಲೆಯನ್ನು ಕೇಂದ್ರವಾಗಿರಿಸಿಕೊಂಡು ಹಲವಾರು ಕಾರ್ಯಕ್ರಮಗಳ ಮೂಲಕ ಈ ಸಂಭ್ರಮವನ್ನು ಆಚರಿಸಲು ಸಿದ್ಧತೆ ನಡೆದಿದೆ ಎಂದು ಕಾರ್ಯಕ್ರಮಗಳ ಪಕ್ಷಿನೋಟವನ್ನು ಮಂಡಿಸಿದರು.ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮಾತೃ ಭಾರತಿ ಅಧ್ಯಕ್ಷರಾದ ಶ್ರೀಮತಿ ಸುಮೇಧಾ ಪಾಟೀಲ್ ಮಾತೃಭಾರತಿ ಕಾರ್ಯಕ್ರಮಗಳ ವಾರ್ಷಿಕ ವರದಿಯನ್ನು ಮಂಡಿಸಿದರು.