Kalaburagi, Nov. 18: Kanakadasa Jayanti was celebrated herein Rashtrotthana Vidya Kendra – Kalaburagi, Sharan Sirasagi. Speaking at the program, Smt. Sandhya Kulkarni gave a brief introduction to Kanakadasa and said, “Kanakadasa, the original name of the poet and social reformer of Kannada, Thimmappa Nayaka, was born in the 16th century (1509-1609) in Bada village and worked hard for the society through devotion and poetry. Kanakadasa was a devotee of Sri Krishna and because of his devotion, Sri Krishna gave him darshan, that kindi is still known as Kanaka’s kindi. Kanakadasa’s kirtanas are famous even today.” A song and proverbs were recited about Kanakadasa in the program. Small children came with famous Dasas.
ಕಲಬುರಗಿ, ನ. 18: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಕಲಬುರಗಿ, ಶರಣ ಶಿರಸಗಿಯಲ್ಲಿ ಕನಕದಾಸ ಜಯಂತಿಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀಮತಿ ಸಂಧ್ಯಾ ಕುಲಕರ್ಣಿ ಅವರು ಕನಕದಾಸರ ಕಿರು ಪರಿಚಯ ನೀಡುತ್ತಾ “ಕನ್ನಡ ನಾಡಿನ ಕವಿ ಹಾಗೂ ಸಮಾಜ ಸುಧಾರಕರಾದ ಕನಕದಾಸರ ಮೂಲ ಹೆಸರು ತಿಮ್ಮಪ್ಪ ನಾಯಕ. 16ನೇ ಶತಮಾನದಲ್ಲಿ (1509-1609) ಬಾಡ ಗ್ರಾಮದಲ್ಲಿ ಜನಿಸಿ ಭಕ್ತಿ ಮತ್ತು ಕಾವ್ಯದ ಮೂಲಕ ಸಮಾಜಕ್ಕಾಗಿ ಶ್ರಮಿಸಿದರು. ಕನಕದಾಸರು ಶ್ರೀ ಕೃಷ್ಣನ ಭಕ್ತಿಗೆ ಪಾತ್ರರಾಗಿದ್ದು ಅವರ ಭಕ್ತಿಗೆ ಒಲಿದು ಶ್ರೀ ಕೃಷ್ಣನು ದರ್ಶನ ಕೊಟ್ಟಿದ್ದಕ್ಕಾಗಿ ಆ ಕಿಂಡಿ ಇಂದಿಗೂ ಕೂಡ ಕನಕನ ಕಿಂಡಿಯೆಂದೇ ಪ್ರಸಿದ್ಧವಾಗಿದೆ. ಕನಕದಾಸರ ಕೀರ್ತನೆಗಳು ಇಂದಿಗೂ ಕೂಡ ಪ್ರಸಿದ್ಧವಾಗಿವೆ” ಎಂದರು. ಕಾರ್ಯಕ್ರಮದಲ್ಲಿ ಕನಕದಾಸರನ್ನು ಕುರಿತು ಹಾಡನ್ನು, ನುಡಿಮುತ್ತುಗಳನ್ನು ಹೇಳಿದರು. ಪುಟಾಣಿ ಮಕ್ಕಳು ಸುಂದರವಾದ ದಾಸರ ವೇಷವನ್ನು ಹಾಕಿಕೊಂಡು ಬಂದಿದ್ದರು.