Kalaburagi Jan. 23- Netaji Subhas Chandra Bose Jayanti was celebrated herein Rashtrotthana Vidyakendra – Kalaburagi. Speaking at the program, Shri Bhimaraya Itagundi, the school’s building and transport manager, said that Netaji gave a new vision to India’s freedom struggle and gave momentum to the freedom struggle by establishing Azad Hind Fauj. He called for us not to sacrifice our lives for the country, but to live for the country.
ಕಲಬುರಗಿ ಜ. 23- ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಕಲಬುರಗಿಯಲ್ಲಿ ನೇತಾಜಿ ಸುಭಾಶ್ಚಂದ್ರ ಭೋಸ್ ಜಯಂತಿಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲೆಯ ಕಟ್ಟಡ ಹಾಗೂ ಸಾರಿಗೆ ವ್ಯವಸ್ಥಾಪಕರಾದ ಶ್ರೀ ಭೀಮರಾಯ ಇಟಗುಂಡಿಯವರು ಮಾತನಾಡುತ್ತಾ, ನೇತಾಜಿಯವರು ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ದೃಷ್ಟಿಯನ್ನು ನೀಡಿದರು ಹಾಗೂ ಆಜಾದ್ ಹಿಂದ್ ಫೌಜ್ ಸ್ಥಾಪನೆ ಮಾಡುವುದರ ಮೂಲಕ ಸ್ವಾತಂತ್ರ್ಯ ಸಂಗ್ರಾಮಕ್ಕೆ ವೇಗವನ್ನು ನೀಡಿದರು ಎಂದು ತಿಳಿಸಿದರು. ದೇಶಕ್ಕಾಗಿ ನಾವು ಪ್ರಾಣಕೊಡುವ ಅವಶ್ಯಕತೆ ಇಲ್ಲ, ದೇಶಕ್ಕಾಗಿ ಬದುಕುವ ಅವಶ್ಯಕತೆ ಇದೆ ಎಂದು ಕರೆನೀಡಿದರು.