Kalaburagi, Sept 5: “The contribution of educators to societal advancement is profound. One can gauge the progress of a society by examining its educational standards and the quality of its teachers”. This statement was made herein from Rashtrotthana Vidya Kendra – Kalaburagi, Sharan Sirasagi, during the Teacher’s Day celebration by Sri Babu Jadhav, a social science instructor at New Vidyalaya Boys High School. Sri Babu Jadhav graced the program. Dr. Sarvepalli Radhakrishnan is commemorated for his significant contributions to education and his effective role as a teacher in fostering societal development. In today’s world, the erosion of values persists. Sri Babu Jadhav expressed the hope that the teaching profession would dedicate itself to the restoration of these values, urging educational institutions focused on nation-building to collaborate in this important endeavour.In the program, books were distributed to all the staff and encouraged to Swdhyaya. Sri Krishna Joshi, the Sanchalaka of the school who presided over the program said, “Teachers can sow national thought and sense of harmony in the society.” Ramesh Kulkarni sang Gurusthavan in the program.
ಕಲಬುರಗಿ, ಸಪ್ಟೆಂಬರ್ 5: “ಸಮಾಜದ ಏಳಿಗೆಯಲ್ಲಿ ಶಿಕ್ಷಕರ ಪಾತ್ರ ಗಣನೀಯವಾದದ್ದು. ಒಂದು ಸಮಾಜವು ಯಾವ ಮಟ್ಟದಲ್ಲಿರುವುದೆಂಬುದನ್ನು ಅಲ್ಲಿನ ಶಿಕ್ಷಣ ಹಾಗೂ ಶಿಕ್ಷಕರನ್ನು ಗಮನಿಸಿ ಅರಿತುಕೊಳ್ಳಬಹುದು ಎನ್ನುವ ಮಾತನ್ನು ಶ್ರೀ ಬಾಬು ಜಾಧವ, ನೂತನ ವಿದ್ಯಾಲಯ ಬಾಲಕರ ಪ್ರೌಢ ಶಾಲೆಯ ಸಮಾಜ ವಿಜ್ಞಾನ ಶಿಕ್ಷಕರು. ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಕಲಬುರಗಿ, ಶರಣ ಸಿರಸಗಿಯ ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಹೇಳಿದರು. ಅವರು ಮುಖ್ಯ ಅಭ್ಯಾಗತರಾಗಿ ಆಗಮಿಸಿದ್ದರು. ಮೌಲ್ಯಯುತ ಶಿಕ್ಷಣ ನೀಡಿದ್ದಕ್ಕಾಗಿ ಹಾಗೂ ಸಮಾಜದ ಅಭಿವೃದ್ಧಿಗಾಗಿ ಶಿಕ್ಷಕರಾಗಿ ತಮ್ಮ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಿದ್ದಕ್ಕಾಗಿ ಡಾ. ಸರ್ವೇಪಲ್ಲಿ ರಾಧಾಕೃಷ್ಣನ್ ಅವರನ್ನು ನೆನೆಸಿಕೊಳ್ಳುತ್ತೇವೆ. ಈ ಆಧುನಿಕ ಯುಗದಲ್ಲಿ ಮೌಲ್ಯಗಳ ಕುಸಿತ ನಿರಂತರವಾಗಿ ನಡೆಯುತ್ತಿದೆ. ಅದರ ಪುನರುತ್ಥಾನಕ್ಕೆ ಶಿಕ್ಷಕ ಸಮುದಾಯ ಪ್ರತಿಬದ್ಧರಾಗಬೇಕು, ಇಂತಹ ಕಾರ್ಯದಲ್ಲಿ ರಾಷ್ಟ್ರ ನಿರ್ಮಾಣದ ಚಿಂತನೆ ಇರುವ ಶಿಕ್ಷಣ ಸಂಸ್ಥೆಗಳು ಒಮ್ಮನದಿಂದ ಕಾರ್ಯನಿರ್ವಹಿಸಬೇಕು ಎಂದು ಆಶಿಸಿದರು. ಕಾರ್ಯಕ್ರಮದಲ್ಲಿ ಎಲ್ಲ ಸಿಬ್ಬಂದಿ ವರ್ಗದವರಿಗೆ ಪುಸ್ತಕಗಳನ್ನು ವಿತರಿಸಿ, ಸ್ವಾಧ್ಯಾಯಕ್ಕೆ ಪ್ರೇರೇಪಿಸಲಾಯಿತು. ಕಾರ್ಯಕ್ರಮದಲ್ಲಿ ರಮೇಶ್ ಕುಲಕರ್ಣಿ ಗುರುಸ್ಥವನ ಹಾಡಿದರು. “ಶಿಕ್ಷಕರಿಂದ ಸಮಾಜದಲ್ಲಿ ರಾಷ್ಟ್ರೀಯ ಚಿಂತನೆ ಹಾಗೂ ಸಾಮರಸ್ಯ ಭಾವ ಬಿತ್ತಲು ಸಾಧ್ಯ” – ಶ್ರೀ ಕೃಷ್ಣ ಜೋಶಿ, ಶಾಲಾ ಸಂಚಾಲಕರು.