Tulasi Vivaha & Kartika Deepotsava in RVK – Kalaburagi

Kalaburagi, Nov. 12: Tulsi Vivaha and Karthika Deepotsava were celebrated herein Rashtrotthana Vidya Kendra – Kalaburagi, Sharana Sirsagi.
Sanskrit teacher Sri Shrikant Sharma conducted the puja. School Correspondent Sri Krishna Joshi inaugurated the Deepotsava and explained the importance of lighting the lamp and said, “It is a symbol of knowledge, progress and determination to overcome evil forces. Due to the negative mindset of several anti-national forces who criticize and belittle our traditions, the scale and influence of our celebrations have reduced. These traditions can be restored only with the collective efforts of our community members and parents. Our efforts should be continuous to create awareness among children about the background, importance and sentiments of festivals.” The students presented a cultural program; parents celebrated Karthika Deepotsava by lighting the lamp with their children.

ಕಲಬುರಗಿ, ನ. 12: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಕಲಬುರಗಿ, ಶರಣ ಸಿರಸಗಿಯಲ್ಲಿ ತುಳಸಿ ವಿವಾಹ ಹಾಗೂ ಕಾರ್ತಿಕ ದೀಪೋತ್ಸವವನ್ನು ಆಚರಿಸಲಾಯಿತು. ಸಂಸ್ಕೃತ ಅಧ್ಯಾಪಕರಾದ ಶ್ರೀ ಶ್ರೀಕಾಂತ್ ಶರ್ಮಾ ಅವರು ಪೂಜೆಯನ್ನು ನಡೆಸಿಕೊಟ್ಟರು. ಶಾಲೆಯ ಬಾತ್ಮೀದಾರರಾದ ಶ್ರೀ ಕೃಷ್ಣ ಜೋಶಿ ಅವರು ದೀಪೋತ್ಸವವನ್ನು ಉದ್ಘಾಟಿಸಿ ಮಾತನಾಡಿ, ದೀಪ ಬೆಳಗುವುದರ ಮಹತ್ತ್ವವನ್ನು ವಿವರಿಸಿ ಮಾತನಾಡುತ್ತ, “ಇದು ಜ್ಞಾನ, ಪ್ರಗತಿ ಮತ್ತು ದುಷ್ಟಶಕ್ತಿಯನ್ನು ಜಯಿಸುವ ಸಂಕಲ್ಪದ ಸಂಕೇತವಾಗಿದೆ. ನಮ್ಮ ಸಂಪ್ರದಾಯಗಳನ್ನು ಟೀಕಿಸುವ ಮತ್ತು ಕೀಳಾಗಿ ಕಾಣುವ ಹಲವಾರು ದೇಶವಿರೋಧಿ ಶಕ್ತಿಗಳ ನಕಾರಾತ್ಮಕ ಮನಸ್ಥಿತಿಯಿಂದಾಗಿ, ನಮ್ಮ ಆಚರಣೆಗಳ ಪ್ರಮಾಣ ಮತ್ತು ಪ್ರಭಾವ ಕಡಿಮೆಯಾಗಿದೆ. ನಮ್ಮ ಸಮುದಾಯದ ಸದಸ್ಯರು ಮತ್ತು ಪೋಷಕರ ಸಾಮೂಹಿಕ ಪ್ರಯತ್ನದಿಂದ ಮಾತ್ರ ಈ ಸಂಪ್ರದಾಯಗಳನ್ನು ಮರುಸ್ಥಾಪಿಸಲು ಸಾಧ್ಯ. ಮಕ್ಕಳಲ್ಲಿ ಹಬ್ಬ ಹರಿದಿನಗಳ ಹಿನ್ನೆಲೆ, ಮಹತ್ತ್ವ, ಭಾವನೆಗಳ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ನಿರಂತರವಾಗಿರಬೇಕು” ಎಂದರು ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು; ಪೋಷಕರು ತಮ್ಮ ಮಕ್ಕಳೊಂದಿಗೆ ದೀಪ ಬೆಳಗಿಸಿ ಕಾರ್ತಿಕ ದೀಪೋತ್ಸವವನ್ನು ಆಚರಿಸಿದರು.

Scroll to Top