Kalaburagi, Dec. 26: Veera Baladivas was celebrated herein Rashtrotthana Vidya Kendra -Kalaburagi, Devala Gangapura Road. School Correspondent Sri Krishna Joshi spoke in the program and said that the sacrifice of many people is to protect the identity of the country and Hinduism. Zorava Simha and Fateh Simha are at the top in the ranks of such heroes. These 7- and 9-year-old boys died bravely without any temptation. He said that children can get inspiration from the memory of such brave boys.
ಕಲಬುರಗಿ, ಡಿ. 26: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಕಲಬುರಗಿ, ದೇವಳ ಗಾಣಗಾಪುರ ರಸ್ತೆಯಲ್ಲಿ ವೀರ ಬಾಲದಿವಸ್ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲೆಯ ಕರೆಸ್ಪಾಂಡೆಂಟ್ ಶ್ರೀ ಕೃಷ್ಣ ಜೋಶಿ ಅವರು ಮಾತನಾಡುತ್ತಾ, ದೇಶ ಹಾಗೂ ಹಿಂದೂ ಧರ್ಮದ ಅಸ್ಮಿತೆಯನ್ನು ಕಾಪಾಡುವಲ್ಲಿ ಅನೇಕ ಜನರ ಬಲಿದಾನವಾಗಿದೆ. ಅಂಥಹ ವೀರರ ಸಾಲಿನಲ್ಲಿ ಜೋರಾವ ಸಿಂಹ ಹಾಗೂ ಫತೆ ಸಿಂಹ ಅವರು ಅಗ್ರಸ್ಥಾನಕ್ಕೆ ಸೇರುತ್ತಾರೆ. ಹಾಲಗಲ್ಲದ 7 ಹಾಗೂ 9 ವರ್ಷದ ಈ ಬಾಲಕರು ಯಾವ ಆಮಿಷಕ್ಕೂ ಒಳಗಾಗದೆ ದಿಟ್ಟಹೃದಯದಿಂದ ವೀರ ಮರಣವನ್ನು ಅಪ್ಪಿದರು. ಇಂಥಹ ವೀರ ಬಾಲಕರ ಸ್ಮರಣೆಯಿಂದ ಮಕ್ಕಳು ಪ್ರೇರಣೆ ಪಡೆಯಬಹುದಾಗಿದೆ ಎಂದು ತಿಳಿಸಿದರು.