“Tilak fought for the country against the British. He declared “Swaraj is My Birth Right”. She created awareness of the immoral oppression of the British government through the Kesari newspaper, and united the people of India and brought awareness about patriotism and freedom” – Smt. Srimanthini. Kalaburagi, Aug 1: Balagangadhar Tilak Jayanti was celebrated herein Rashtrotthana Vidya Kendra – Kalaburagi, Sharana Sirasagi. Smt. Srimanthini offered flowers to the portrait and gave information about Tilak’s patriotism and work.
ಕಲಬುರಗಿ, ಆಗಸ್ಟ್ 1: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಕಲಬುರಗಿ, ಶರಣಸಿರಸಗಿಯಲ್ಲಿ ಬಾಲಗಂಗಾಧರ ತಿಲಕರ ಜಯಂತಿಯನ್ನು ಆಚರಿಸಿಲಾಯಿತು. ಶ್ರೀಮತಿ ಶ್ರೀಮಂತಿನಿ ಅವರು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ತಿಲಕರ ದೇಶಭಕ್ತಿ ಹಾಗೂ ಕಾರ್ಯದ ಕುರಿತು ಮಾಹಿತಿ ನೀಡಿದರು. ತಿಲಕರು ದೇಶಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದರು. “ಸ್ವರಾಜ್ಯ ನನ್ನ ಆಜನ್ಮ ಸಿದ್ಧ ಹಕ್ಕು” ಎಂದು ಘೋಷಣೆ ಮಾಡಿದರು. ಇವರು ಕೇಸರಿ ಪತ್ರಿಕೆಯ ಮೂಲಕ ಬ್ರಿಟಿಷ್ ಸರ್ಕಾರದ ಅನೈತಿಕ ದಬ್ಬಾಳಿಕೆಯ ಅರಿವು ಮೂಡಿಸಿದರು, ಜೊತೆಗೆ ಭಾರತ ದೇಶದ ಜನರನ್ನು ಒಗ್ಗೂಡಿಸಿ ದೇಶಪ್ರೇಮ, ಸ್ವಾತಂತ್ರ್ಯದ ಬಗ್ಗೆ ಜಾಗೃತಿ ತಂದರು ಎಂದು ಶ್ರೀಮತಿ ಶ್ರೀಮಂತಿನಿಯವರು ಹೇಳಿದರು.