Swearing-in ceremony of Member of Parliament in RVK – Kalaburagi

A life of dignity can only be established through a refined education; educational institutions ought to serve as hubs of discipline and social accountability. In this context, the significance of educational institutions and their faculty is paramount: Retired army officer Sri Mallikarjun Madiwal: Swearing-in ceremony of Member of Parliament RVK – Kalaburagi, Sharan Sirasagi.

Kalaburagi, Aug 13: Inaugural ceremony of School Parliament Members was organized herein Rashtrotthana Vidya Kendra – Kalaburagi, Sharan Sirasagi. Retired Army Officer, Sri Mallikarjuna Madiwal arrived as guest of the program and distributed badges to the children.Sri Krishna Joshi, who presided over the program, expressed the opinion that children can become good leaders only when they know that the responsibility they have got is a responsibility to help others. Sri Girish Joshi, Principal of the school, administered the oath to the children.

ಸಂಸ್ಕಾರಯುತ ಶಿಕ್ಷಣದಿಂದ ಮಾತ್ರ ಸ್ವಾಭಿಮಾನಿ ಬದುಕನ್ನು ಕಟ್ಟಲು ಸಾಧ್ಯ; ಶಾಲೆಗಳು ಶಿಸ್ತನ್ನು ಕಲಿಸುವ ಹಾಗೂ ಸಮಾಜದ ಬಗ್ಗೆ ಹೊಣೆಗಾರಿಕೆಯನ್ನು ಕಲಿಸುವ ಕೇಂದ್ರಗಳಾಗಬೇಕು. ಈ ನಿಟ್ಟಿನಲ್ಲಿ ಶಾಲೆ ಮತ್ತು ಅಧ್ಯಾಪಕರ ಪಾತ್ರ ಮುಖ್ಯವಾದದ್ದು: ನಿವೃತ್ತ ಸೇನಾಧಿಕಾರಿ ಶ್ರೀ ಮಲ್ಲಿಕಾರ್ಜುನ್ ಮಡಿವಾಳ್: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಕಲಬುರಗಿ, ಶರಣ ಸಿರಸಗಿಯ ಸಂಸತ್ ಸದಸ್ಯರ ಪದಗ್ರಹಣ ಸಮಾರಂಭದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.

ಕಲಬುರಗಿ, ಆಗಸ್ಟ್ 13: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಕಲುಬುರಗಿ, ಶರಣ ಸಿರಸಗಿಯಲ್ಲಿ ಶಾಲಾ ಸಂಸತ್ತಿನ ಸದಸ್ಯರ ಪದಗ್ರಹಣ ಸಮಾರಂಭವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಅತಿಥಿಗಳಾಗಿ ನಿವೃತ್ತ ಸೇನಾಧಿಕಾರಿ ಶ್ರೀ ಮಲ್ಲಿಕಾರ್ಜುನ ಮಡಿವಾಳ್ ಅವರು ಆಗಮಿಸಿ ಮಕ್ಕಳಿಗೆ ಬ್ಯಾಡ್ಜ್ ಗಳನ್ನು ವಿತರಿಸಿದರು.ಮಕ್ಕಳು ಪಡೆದಿರುವ ಜವಾಬ್ದಾರಿ ಒಂದು ಹೊಣೆಗಾರಿಕೆ ಅದು ಪರರಿಗೆ ಸಹಾಯ ಮಾಡಲು ಎಂದು ತಿಳಿದಾಗ ಮಾತ್ರ ಅವರೊಬ್ಬ ಉತ್ತಮ ನಾಯಕನಾಗಲು ಸಾಧ್ಯ ಎನ್ನುವ ಅಭಿಪ್ರಾಯವನ್ನು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಕೃಷ್ಣ ಜೋಶಿಯವರು ವ್ಯಕ್ತಪಡಿಸಿದರು. ಶಾಲೆಯ ಪ್ರಧಾನಾಚಾರ್ಯರಾದ ಶ್ರೀ ಗಿರೀಶ್ ಜೋಶಿ ಅವರು ಮಕ್ಕಳಿಗೆ ಪ್ರಮಾಣವಚನ ಬೋಧಿಸಿದರು.

Scroll to Top