Matru Bharati Program in RVK – Kalaburagi

Kalaburgi, October 25: Matru Bharati program was held herein Rashtrotthana Vidya Kendra – Kalaburgi, Sharana Sirasagi. Sri Girish Joshi, who arrived as a guest at the event, talked about the specialness of the festival and the celebration of our Hindu tradition. A rangoli and lamp decoration competition was organized for all mothers on the occasion of the festival and prizes were given to the winners. Women highlighted creativity in art. They realized the specialness of Diwali and the importance of celebrating the festival for five consecutive days. Smt. Haripriya Buchanalli sang the devotional song. Sri Shrikant Patil, the administrative officer of the program, President of Matru Bharati Smt. Sumeda Patil, all members of Matru Bharati were present.

ಕಲಬುರಗಿ, ಅಕ್ಟೋಬರ್ 25: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಕಲಬುರಗಿ, ಶರಣ ಸಿರಸಗಿಯಲ್ಲಿ ಮಾತೃ ಭಾರತಿ ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮಕ್ಕೆ ಅಭ್ಯಾಗತರಾಗಿ ಆಗಮಿಸಿದ ಶ್ರೀ ಗಿರೀಶ್ ಜೋಶಿಯವರು ಹಬ್ಬದ ವಿಶೇಷತೆ ಹಾಗೂ ನಮ್ಮ ಹಿಂದೂ ಸಂಪ್ರದಾಯದ ಆಚರಣೆಯ ಬಗ್ಗೆ ತಿಳಿಸಿದರು. ಎಲ್ಲಮಾತೆಯರಿಗಾಗಿ ಹಬ್ಬದ ಪ್ರಯುಕ್ತ ರಂಗೋಲಿ ಹಾಗೂ ದೀಪ ಅಲಂಕಾರ ಸ್ಪರ್ಧೆ ಏರ್ಪಡಿಸಲಾಗಿತ್ತು, ವಿಜೇತರಿಗೆ ಬಹುಮಾನ ಕೊಡಲಾಯಿತು. ಮಹಿಳೆಯರು ಕಲೆಯಲ್ಲಿ ಸೃಜನಶೀಲತೆಯನ್ನು ಎತ್ತಿ ತೋರಿಸಿದರು. ದೀಪಾವಳಿಯ ವಿಶೇಷತೆ ಹಾಗೂ ಸತತವಾಗಿ ಐದು ದಿನಗಳ ಹಬ್ಬದ ಆಚರಣೆಯ ಮಹತ್ವವನ್ನು ಅರಿತರು. ಶ್ರೀಮತಿ ಹರಿಪ್ರಿಯಾ ಬುಚನಳ್ಳಿ ಭಕ್ತಿಗೀತೆಯನ್ನು ಹಾಡಿದರು. ಕಾರ್ಯಕ್ರಮದಲ್ಲಿ ಆಡಳಿತಾಧಿಕಾರಿಯಾದ ಶ್ರೀಕಾಂತ್ ಪಾಟೀಲ್, ಮಾತೃ ಭಾರತೀಯ ಅಧ್ಯಕ್ಷೆ ಸುಮೇದ ಪಾಟೀಲ, ಮಾತೃ ಭಾರತೀಯ ಎಲ್ಲ ಸದಸ್ಯರು ಪಾಲ್ಗೊಂಡಿದ್ದರು.

Scroll to Top