Kalaburgi, Sept 6: The Ganeshotsava celebrated herein Rashtrotthana Vidya Kendra – Kalaburgi, Sharansirasagi. Commenced with the installation of the Ganesha idol. The children participated in a procession, carrying the idol while playing the ghosh instrument, and subsequently placed it in the mandapam. The Pooja Kainkarya was conducted by Sri Satyapramod Navali.Sri Srikanta Sharma, a Sanskrit teacher, explained the background of the installation of public Ganapati and the customs to be observed. The children performed a Balganesh play and Lajim dance.Prasad was distributed after Mahamangalarati.
ಕಲಬುರಗಿ, ಸಪ್ಟೆಂಬರ್ 6: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಕಲಬುರಗಿ, ಶರಣಸಿರಸಗಿಯಲ್ಲಿ ಗಣೇಶೋತ್ಸವದ ಸಂಭ್ರಮ. ಕಾರ್ಯಕ್ರಮವನ್ನು ಗಣೇಶ ಪ್ರತಿಷ್ಠಾಪನೆಯೊಂದಿಗೆ ಆರಂಭಿಸಲಾಯಿತು. ಮಕ್ಕಳು ಘೋಷ್ ವಾದ್ಯ ನುಡಿಸುತ್ತ ಮೆರವಣಿಗೆಯ ಮೂಲಕ ಗಣೇಶ ವಿಗ್ರಹವನ್ನು ತಂದು ಮಂಟಪದಲ್ಲಿ ಪ್ರತಿಷ್ಠಾಪಿಸಿದರು. ಶ್ರೀ ಸತ್ಯಪ್ರಮೋದ ನವಲಿಯವರು ಪೂಜಾ ಕೈಂಕರ್ಯವನ್ನು ನೆರವೇರಿಸಿದರು. ಸಂಸ್ಕೃತ ಅಧ್ಯಾಪಕರಾದ ಶ್ರೀ ಶ್ರೀಕಾಂತ ಶರ್ಮಾ ಅವರು ಸಾರ್ವಜನಿಕ ಗಣಪತಿಯ ಪ್ರತಿಷ್ಠಾಪನೆಯ ಹಿನ್ನೆಲೆ, ಆಚರಿಸಬೇಕಾದ ಪದ್ಧತಿಯನ್ನು ತಿಳಿಸಿಕೊಟ್ಟರು. ಮಕ್ಕಳು ಚತುರ ಬಾಲಗಣೇಶ ನಾಟಕವನ್ನು ಹಾಗೂ ಲೇಜಿಮ್ ನೃತ್ಯವನ್ನು ಪ್ರದರ್ಶಿಸಿದರು.ಮಹಾಮಂಗಳಾರತಿಯ ಬಳಿಕ ಪ್ರಸಾದವನ್ನು ವಿತರಿಸಲಾಯಿತು.