Kalaburagi, Feb 28 : National Science Day was celebrated in Rashtrotthana Vidya Kendra – Kalaburagi. National Science Day is celebrated to mark the discovery of the Raman Effect by Indian Physicist, Sir C V Raman on this day in 1928. In this relation a Science Week was celebrated to till this day.
ಕಲಬುರಗಿ, ಫೆಬ್ರವರಿ 28: ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ – ಕಲಬುರಗಿಯಲ್ಲಿ ವಿಜ್ಞಾನ ಸಪ್ತಾಹವನ್ನು ಹಮ್ಮಿಕೊಳ್ಳಲಾಗಿತ್ತು. ಸಪ್ತಾಹದ ಕೊನೆಯ ದಿನವಾದ ಇಂದು 4, 5 ಮತ್ತು 6 ನೇ ತರಗತಿಯ ಮಕ್ಕಳು ವಿಜ್ಞಾನಕ್ಕೆ ಸಂಬಂಧಿಸಿದ ಹಾಡು ಹಾಡಿ ಮತ್ತು ನಾಟಕವನ್ನು ಅಭಿನಯಿಸಿದರು. ಈ ಕಾರ್ಯಕ್ರಮಕ್ಕೆ ಅಭ್ಯಾಗತರಾಗಿ ಬಂದಂತಹ ಸರಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯ, ಕಲಬುರಗಿಯ ಉಪನ್ಯಾಸಕರಾದ ಶ್ರೀ ವಸಂತ ಶಾಬಾದಕರ್ ಅವರು, ವಿಜ್ಞಾನ ಸಪ್ತಾಹದ ಅಂಗವಾಗಿ ಹಮ್ಮಿಕೊಂಡಂತಹ ಹಲವಾರು ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನವನ್ನು ವಿತರಿಸಿ ಮಾತನಾಡಿದರು. ವಿಜ್ಞಾನದಿಂದಲೇ ಬೆಳಗಾಗುವುದು, ದಿನನಿತ್ಯದ ಜೀವನದಲ್ಲಿ ಬಳಸುವ ವಸ್ತುಗಳೆಲ್ಲವೂ ವಿಜ್ಞಾನಮಯವೇ. ವಿಕಸಿತ ಭಾರತದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಪಾತ್ರ ಬಹಳಷ್ಟು ದೊಡ್ಡದು. ವಿಜ್ಞಾನವಿಲ್ಲದೇ ಜೀವನ ಸಾಧ್ಯವೇ ಇಲ್ಲ. ವಿಜ್ಞಾನ ಹಾಗೂ ತಂತ್ರಜ್ಞಾನ ವೇದಗಳ ಕಾಲದಿಂದಲೂ ಭಾರತದಲ್ಲಿ ಉತ್ತುಂಗದಲ್ಲಿತ್ತು ಹಾಗೂ ನಮ್ಮ ಕೊಡುಗೆ ವಿಶ್ವಮಾನ್ಯವಾಗಿದೆ ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಶಾಲೆಯ ಕರಸ್ಪಾಂಡೆಂಟ್ ರಾದ ಶ್ರೀ ಕೃಷ್ಣಾ ಜೋಶಿ, ಪ್ರಧಾನಾಚಾರಾದ ಶ್ರೀ ಗಿರೀಶ್ ಜೋಶಿ ಹಾಗೂ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.