Home > News & Events >Sri Krishna Janmashtami in RVK – Kalaburagi
Kalaburagi, Aug. 16: Sri Krishna Janmashtami was celebrated herein
Rashtrotthana Vidya Kendra – Kalaburagi, Sharan Shirasagi. ISKCON Chief Raochuru Charanadas of Kalaburagi arrived as a guest
of honour for the program. Speaking, he said that Lord Sri Krishna incarnated to suppress the evil and protect the righteous and re- established the religion. From time to time, when the religion reached a stage of decline, many great great souls took birth and re-established it.
He expressed the hope that we should all recognize the aspect of the
Supreme God in each of us and destroy the Kansa of the six elements in
us and become great people and contribute our share in the protection
of the nation and religion.All the children said “Hare Rama Hare Rama Rama Rama Hare Hare Hare Krishna Hare Krishna Krishna Hare Hare”. All the teachers put Krishna in the cradle. In the program, Gokulam children came dressed as Lord Krishna, Radhe, Yashoda, and Gopi and others. Several children gave group dance, song and art performances in the program. Lord Krishna’s favourite food, butter sugar, and Avalakki were distributed as prasad to all the children. As part of Krishna Janmashtami, free eye examination was conducted for all the children at the school under the leadership of Dr. Vishwanath Reddy from Sri Siddarameshwara Eye Hospital.
ಕಲಬುರಗಿ, ಆ. 16: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಕಲಬುರಗಿ, ಶರಣ ಶಿರಸಗಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಅಭ್ಯಾಗತರಾಗಿ ಇಸ್ಕಾನ್ ಮುಖ್ಯಸ್ಥರು ಕಲಬುರಗಿಯ ರಾoಚೂರು ಚರಣದಾಸರವರು ಆಗಮಿಸಿದ್ದರು, ಅವರು ಮಾತನಾಡುತ್ತ, ದುಷ್ಟರ ನಿಗ್ರಹಕ್ಕಾಗಿ ಶಿಷ್ಟರ ರಕ್ಷಣೆಗಾಗಿ ಭಗವಾನ್ ಶ್ರೀ ಕೃಷ್ಣನು ಅವತರಿಸಿ ಧರ್ಮವನ್ನು ಮತ್ತೆ ಸಂಸ್ಥಾಪನೆ ಮಾಡಿದನು. ಕಾಲಕಾಲಕ್ಕೆ ಧರ್ಮವು ಅವನತಿ ಹಂತಕ್ಕೆ ತಲುಪಿದಾಗ ಹಲವಾರು ಶ್ರೇಷ್ಠ ಮಹಾತ್ಮರು ಜನ್ಮ ತಾಳಿ ಪುನರ್ ಸ್ಥಾಪನೆ ಮಾಡಿದ್ದಾರೆ.ನಾವೆಲ್ಲರೂ ಪ್ರತಿಯೊಬ್ಬರಲ್ಲೂ ಪರಮಾತ್ಮನ ಅಂಶವನ್ನು ಗುರುತಿಸಿ ನಮ್ಮಲ್ಲಿ ಇರುವಂತಹ ಅರಿ ಷಡ್ವರ್ಗಗಳೆಂಬ ಕಂಸನನ್ನು ನಾಶಪಡಿಸಿಕೊಂಡು ಶ್ರೇಷ್ಠ ವ್ಯಕ್ತಿಗಳಾಗಿ ರಾಷ್ಟ್ರ ಹಾಗೂ ಧರ್ಮ ರಕ್ಷಣೆಯಲ್ಲಿ ನಮ್ಮ ಪಾಲನ್ನು ಸಲ್ಲಿಸಬೇಕು ಎಂದು ಆಶಯ ವ್ಯಕ್ತಪಡಿಸಿದರು. ಮಕ್ಕಳಿಗೆಲ್ಲರೂ ” ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಹರೇ ಹರೇ”ಎಂದು ಹೇಳಿದರು. ಎಲ್ಲ ಶಿಕ್ಷಕಿಯರು ಕೃಷ್ಣನಿಗೆ ತೊಟ್ಟಿಲಿಗೆ ಹಾಕಿ ತೂಗಿದರು . ಕಾರ್ಯಕ್ರಮದಲ್ಲಿ ಗೋಕುಲಮ್ ಮಕ್ಕಳು ಶ್ರೀಕೃಷ್ಣ, ರಾಧೆ, ಯಶೋಧ, ಹಾಗೂ ಗೋಪಿ ಇನ್ನೂ ಮುಂತಾದ ಛದ್ಮವೇಷಗಳನ್ನು ಧರಿಸಿ ಬಂದಿದ್ದರು. ಕಾರ್ಯಕ್ರಮದಲ್ಲಿ ಹಲವಾರು ಮಕ್ಕಳು ಸಾಮೂಹಿಕ ನೃತ್ಯ , ಹಾಡು ಹಾಗೂ ಕಲಾ ಪ್ರದರ್ಶನಗಳನ್ನು ನೀಡಿದರು. ಶ್ರೀಕೃಷ್ಣನ ನೆಚ್ಚಿನ ತಿನಿಸಾದ ಬೆಣ್ಣೆ ಸಕ್ಕರೆಯನ್ನು , ಹಾಗೂ ಅವಲಕ್ಕಿ ಎಲ್ಲ ಮಕ್ಕಳಿಗೆ ಪ್ರಸಾದ ರೂಪದಲ್ಲಿ ವಿತರಿಸಲಾಯಿತು. ಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಶಾಲೆಯಲ್ಲಿ ಡಾ. ವಿಶ್ವನಾಥ್ ರೆಡ್ಡಿ ಅವರ ನೇತೃತ್ವದಲ್ಲಿ ಶ್ರೀ ಸಿದ್ದರಾಮೇಶ್ವರ ಕಣ್ಣಿನ ಆಸ್ಪತ್ರೆ ಕಡೆಯಿಂದ ಮಕ್ಕಳಿಗೆಲ್ಲ ಉಚಿತ ನೇತ್ರ ಪರೀಕ್ಷೆಯನ್ನು ಮಾಡಲಾಯಿತು.