Kalaburagi, Dec. 6: Kutumba Prabhodhana & Samarasya Bhojana program was organized under RP@60 herein Rashtrotthana Vidya Kendra – Kalaburagi.
Sri Su. Ramanna, a senior pracharak of the Rashtriya Swayamsevak Sangh, who arrived as a spokesperson for the program, lit the lamp and was speaking that the family system is a noble concept in India. In this family system, love, trust, care, safety, self-respect include many dimensions. There are hundreds of relationships like grandfather, grandmother, uncle, aunt, great-grandfather, great-grandmother, elder sister, etc. Responsibility rather than power, a shoulder to lean on in pain, hearts that laugh in happiness, hands that join in work, etc. The family system is like a protective shield for everything.
Where such an atmosphere exists in a house, prosperity, peace and culture are stable. He called upon all of us to maintain and move forward in the changing situation.The program honoured the elderly couple, Smt. Sharada Police and Sri Dharmagouda Police.The children performed songs and dances, and a Samuhika Bhojana was served after the program.

ಕಲಬುರಗಿ, ಡಿ. 6: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಕಲಬುರಗಿಯಲ್ಲಿ RP@60 ಅಡಿಯಲ್ಲಿ ಕುಟುಂಬ ಪ್ರಬೋಧನ ಹಾಗೂ ಸಾಮರಸ್ಯ ಭೋಜನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ಕಾರ್ಯಕ್ರಮಕ್ಕೆ ವಕ್ತಾರರಾಗಿ ಆಗಮಿಸಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಪ್ರಚಾರಕರಾದ ಶ್ರೀ ಸು. ರಾಮಣ್ಣ ಅವರು ದೀಪ ಪ್ರಜ್ವಲನ ಮಾಡುತ್ತಾ. ಕುಟುಂಬ ವ್ಯವಸ್ಥೆ ಭಾರತದ ಒಂದು ಉತ್ಕೃಷ್ಟ ಪರಿಕಲ್ಪನೆ. ಈ ಕುಟುಂಬ ವ್ಯವಸ್ಥೆಯಲ್ಲಿ ಪ್ರೀತಿ, ವಿಶ್ವಾಸ, ಕಾಳಜಿ, ಸುರಕ್ಷತೆ, ಸ್ವಾಭಿಮಾನ ಹಲವಾರು ಆಯಾಮಗಳನ್ನು ಒಳಗೊಂಡಿದೆ. ಅಜ್ಜ, ಅಜ್ಜಿ, ಚಿಕ್ಕಪ್ಪ, ಚಿಕ್ಕಮ್ಮ, ದೊಡ್ಡಪ್ಪ, ದೊಡ್ಡಮ್ಮ, ಅಕ್ಕ-ತಂಗಿ ಹೀಗೆ ನೂರಾರು ಸಂಬಂಧಗಳಿವೆ. ಅಧಿಕಾರಕ್ಕಿಂತ ಜವಾಬ್ದಾರಿ ನೋವಿನಲ್ಲಿ ಆಸರೆಯ ಭುಜ, ಸಂತೋಷದಲ್ಲಿ ನಗುವ ಮನಗಳು, ಕೆಲಸದಲ್ಲಿ ಜೋಡುವ ಕೈಗಳು, ಹೀಗೆ ಪ್ರತಿಯೊಂದು ಸಂಗತಿಗಳಿಗೆ ಕುಟುಂಬ ವ್ಯವಸ್ಥೆ ಒಂದು ಸುರಕ್ಷಾ ಕವಚವಿದ್ದಂತೆ.ಯಾವ ಮನೆಯಲ್ಲಿ ಇಂಥಹ ವಾತಾವರಣ ವಿದೆಯೋ ಅಲ್ಲಿ ಸಮೃದ್ಧಿ, ನೆಮ್ಮದಿ ಹಾಗೂ ಸಂಸ್ಕೃತಿ ಸ್ಥಿರವಾಗಿವಾಗಿರುತ್ತದೆ. ಬದಲಾಗುತ್ತಿರುವ ಪರಿಸ್ಥಿತಿಯಲ್ಲಿ ಈ ವ್ಯವಸ್ಥೆಯನ್ನು ಉಳಿಸಿಕೊಂಡು, ಹೋಗುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಕರೆನೀಡಿದರು.
ಕಾರ್ಯಕ್ರಮದಲ್ಲಿ ಹಿರಿಯ ದಂಪತಿಗಳಾದ ಶ್ರೀಮತಿ ಶಾರದಾ ಪೊಲೀಸ್ , ಶ್ರೀ ಧರಮಗೌಡ ಪೊಲೀಸ್ ಅವರನ್ನು ಸನ್ಮಾನಿಸಲಾಯಿತು. ಮಕ್ಕಳು ಹಾಡು ಹಾಗೂ ನೃತ್ಯ ಪ್ರದರ್ಶಿಸಿದರು, ಕಾರ್ಯಕ್ರಮದ ನಂತರ ಸಾಮರಸ್ಯ ಭೋಜನ ಸ್ವೀಕರಿಸಲಾಯಿತು.