Kalaburagi, Dec. 27: The Valedictory Function of the ‘Kreedotsava’ was held at Rashtrotthana Vidya Kendra – Kalaburagi. Sri Mallinath Auradi, District Karyaavaha RSS Kalaburagi arrived as the chief guest and addressed the audience and said, “If children want to become physically fit, they should play on the field, not on mobile. Children should be filled with inspiration and prepared to play at the national and international level.” Smt. Deepa S. Badige read the sports report in the program. Sri Omkar Swami recited the closing mantra. Prizes were distributed to the winning teams.

ಕಲಬುರಗಿ, ಡಿ. 27: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಕಲಬುರಗಿಯಲ್ಲಿ ಕ್ರೀಡೋತ್ಸವದ ಸಮಾರೋಪ ಸಮಾರಂಭ ನಡೆಸಲಾಯಿತು. ಮುಖ್ಯ ಅತಿಥಿಗಳಾಗಿ ಶ್ರೀ ಮಲ್ಲಿನಾಥ ಔರಾದಿ, ಜಿಲ್ಲಾ ಕಾರ್ಯವಾಹ ಆರ್ ಎಸ್ ಎಸ್ ಕಲಬುರಗಿ ಇವರು ಆಗಮಿಸಿದ್ದು ಅವರು ಸಭಿಕರನ್ನುದ್ದೇಶೀಸಿ ಮಾತನಾಡುತ್ತ, “ಮಕ್ಕಳು ಶಾರೀರಿಕವಾಗಿ ಸದೃಢವಾಗಬೇಕಾದರೆ ಮೈದಾನದಲ್ಲಿ ಆಡಬೇಕು, ಮೊಬೈಲನಲ್ಲಿ ಅಲ್ಲ. ಮಕ್ಕಳಲ್ಲಿ ಸ್ಪೂರ್ತಿ ತುಂಬಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟಕ್ಕೆ ಆಡುವ ಹಾಗೆ ತಯಾರಾಗಬೇಕು” ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಶ್ರೀಮತಿ ದೀಪಾ ಎಸ್. ಬಡಿಗೇರವರು ಕ್ರೀಡಾ ವರದಿಯನ್ನು ಓದಿದರು. ಸಮಾಪನ ಮಂತ್ರವನ್ನು ಶ್ರೀ ಓಂಕಾರ್ ಸ್ವಾಮೀ ಹೇಳಿದರು. ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು.