Kalaburagi, Jan. 19: Purandasara Jayanti was celebrated herein Rashtrotthana Vidya Kendra – Kalaburagi, Sharan Shirasagi. The students spoke and said that Purandasara is known as the father of Karnataka music. He strengthened the devotion to God and the tradition of Dasa. He explained that an incident in his life changed his mind and realized that devotion is greater than worldly wealth and dedicated himself to the devotion of Vitthal, music and public service. A student of Gokulam department, Adritha, dressed as Purandasara and sang a kirtan.
ಕಲಬುರಗಿ, ಜ. 19: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಕಲಬುರಗಿ, ಶರಣ ಶಿರಸಗಿಯಲ್ಲಿರುವ ಪುರಂದಾಸರ ಜಯಂತಿಯನ್ನು ಆಚರಿಸಲಾಯಿತು. ವಿದ್ಯಾರ್ಥಿಗಳು ಮಾತನಾಡಿ ಪುರಂದರದಾಸರು ಕರ್ನಾಟಕ ಸಂಗೀತ ಪಿತಾಮಹ ಎಂದು ಪ್ರಸಿದ್ಧರಾಗಿದ್ದಾರೆ. ದೇವರ ಭಕ್ತಿ ಮತ್ತು ದಾಸ ಪರಂಪರೆಯನ್ನು ಬಲಪಡಿಸಿದರು. ಜೀವನದಲ್ಲಿ ನಡೆದ ಒಂದು ಘಟನೆಯಿಂದ ಅವರು ತಮ್ಮ ಮನಸ್ಸನ್ನು ಪರಿವರ್ತಿಸಿಕೊಂಡು ಲೋಕಸಂಪತ್ತಿಗಿಂತ ಭಕ್ತಿಯೇ ಶ್ರೇಷ್ಠ ಎಂದು ಅರಿತು, ವಿಠಲನ ಭಕ್ತಿ, ಸಂಗೀತ ಮತ್ತು ಜನಸೇವೆಗಾಗಿ ತಮ್ಮನ್ನು ಅರ್ಪಿಸಿಕೊಂಡರು ಎಂದು ವಿವರಿಸಿದರು.ಗೋಕುಲಂ ವಿಭಾಗದ ವಿದ್ಯಾರ್ಥಿ ಆದ್ರಿತ ಪುರಂದರದಾಸರ ವೇಷ ಧರಿಸಿ ಕೀರ್ತನೆ ಹಾಡಿದನು.


