Kalaburagi, Jan. 26: The 77th Republic Day was celebrated herein Rashtrotthana Vidya Kendra – Kalaburagi. Sri Vitthal Rao Kulkarni, former Indian Air Force, was the chief guest. The dignitaries hoisted the national flag. The students sang patriotic songs and performed dances. They spoke about the importance of the day in Hindi and English as well as Kannada and Sanskrit. The students presented a disciplined yoga demonstration and displayed a military display. The chief guest, Sri Vitthal Rao Kulkarni, former Indian Air Force, gave an inspiring speech and motivated the students to serve the nation with discipline and dedication. He spoke about the importance of punctuality, discipline, unity, responsibility and being a good citizen. He also explained how the Air Force teaches discipline, financial responsibility and proper use of money.

ಕಲಬುರಗಿ, ಜ. 26: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಕಲಬುರಗಿಯಲ್ಲಿ 77ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಮಾಜಿ ಭಾರತೀಯ ವಾಯುಪಡೆಯ ಶ್ರೀ ವಿಠಲ್ ರಾವ್ ಕುಲಕರ್ಣಿ ಅವರು ಆಗಮಿಸಿದ್ದರು. ಗಣ್ಯರು ರಾಷ್ಟ್ರಧ್ವಜಾರೋಹಣ ಮಾಡಿದರು. ವಿದ್ಯಾರ್ಥಿಗಳು ದೇಶಭಕ್ತಿ ಗೀತೆ ಹಾಡಿದರು ಹಾಗೂ ನೃತ್ಯವನ್ನು ಪ್ರದರ್ಶಿಸಿದರು. ದಿನದ ಮಹತ್ತ್ವದ ಕುರಿತು ಹಿಂದಿ ಹಾಗೂ ಇಂಗ್ಲಿಷ್‌ ಹಾಗೂ ಕನ್ನಡ ಹಾಗೂ ಸಂಸ್ಕೃತದಲ್ಲಿ ಮಾತನಾಡಿದರು. ವಿದ್ಯಾರ್ಥಿಗಳು ಶಿಸ್ತಿನ ಯೋಗ ಪ್ರದರ್ಶನವನ್ನು ಪ್ರಸ್ತುತಪಡಿಸಿದರು ಹಾಗೂ ನಿಯುದ್ಧ ಪ್ರದರ್ಶನವನ್ನು ಪ್ರದರ್ಶಿಸಿದರು. ಮುಖ್ಯ ಅತಿಥಿ, ಮಾಜಿ ಭಾರತೀಯ ವಾಯುಪಡೆಯ ಶ್ರೀ ವಿಠಲ್ ರಾವ್ ಕುಲಕರ್ಣಿ ಅವರು ಸ್ಪೂರ್ತಿದಾಯಕ ಭಾಷಣ ಮಾಡಿ ಶಿಸ್ತು ಮತ್ತು ಸಮರ್ಪಣೆಯೊಂದಿಗೆ ರಾಷ್ಟ್ರಕ್ಕೆ ಸೇವೆ ಸಲ್ಲಿಸಲು ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರು. ಅವರು ಸಮಯಪಾಲನೆ, ಶಿಸ್ತು, ಏಕತೆ, ಜವಾಬ್ದಾರಿ ಮತ್ತು ಉತ್ತಮ ನಾಗರಿಕರಾಗುವುದರ ಮಹತ್ವದ ಬಗ್ಗೆ ಮಾತನಾಡಿದರು. ವಾಯುಪಡೆಯು ಶಿಸ್ತು, ಆರ್ಥಿಕ ಜವಾಬ್ದಾರಿ ಮತ್ತು ಹಣದ ಸರಿಯಾದ ಬಳಕೆಯನ್ನು ಹೇಗೆ ಕಲಿಸುತ್ತದೆ ಎಂಬುದನ್ನು ಸಹ ಅವರು ವಿವರಿಸಿದರು.