Kalaburagi, Mar. 18: Yugadi festival and Dr Hedgewar’s birthday were celebrated at Rashtrotthana Vidya Kendra – Kalaburagi. The program was attended by fellow Sangh leaders and Rashtriya Swayamsevak Sangh Kalburgi Division, Sri Girish Hebbar. The Chief Guest spoke and wished everyone that the beginning of the month of Vasantha in nature reflects a new spirit. We should accept sweet and bitter experiences in life. May there be good changes in us too, and wished everyone the best of luck for the festival. Students spoke about Dr Hedgewar. Children presented Yugadi songs and dances.

ಕಲಬುರಗಿ, ಮಾ. 18: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ -ಕಲಬುರಗಿಯಲ್ಲಿ ಯುಗಾದಿ ಹಬ್ಬ ಹಾಗೂ ಡಾ. ಹೆಡಗೆವಾರ ಜನ್ಮ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಅಭ್ಯಾಗತರಾಗಿ ಸಹ ಸಂಘ ಚಾಲಕರು ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘ ಕಲ್ಬುರ್ಗಿ ವಿಭಾಗ, ಶ್ರೀ ಗಿರೀಶ್ ಹೆಬ್ಬಾರ ಅವರು ಆಗಮಿಸಿದ್ದರು. ಮುಖ್ಯ ಅತಿಥಿಗಳು ಮಾತನಾಡುತ್ತಾ ಪ್ರಕೃತಿಯಲ್ಲಿ ವಸಂತ ಮಾಸದ ಪ್ರಾರಂಭವು ಹೊಸ ಚೈತನ್ಯವನ್ನು ಪ್ರತಿಬಿಂಬಿಸುತ್ತದೆ. ಜೀವನದಲ್ಲಿ ಸಿಹಿ ಕಹಿ ಅನುಭವವನ್ನು ಸ್ವೀಕಾರ ಮಾಡಬೇಕು. ನಮ್ಮಲ್ಲಿಯೂ ಒಳ್ಳೆಯ ಬದಲಾವಣೆಗಳಾಗಲಿ ಎಂದು ಹಾರೈಸಿ ಹಬ್ಬದ ಶುಭಾಶಯಗಳನ್ನು ಎಲ್ಲರಿಗೂ ಕೋರಿದರು. ಡಾ. ಹೆಡಗೆವಾರ್ ಬಗ್ಗೆ ವಿದ್ಯಾರ್ಥಿಗಳು ಮಾತನಾಡಿದರು. ಮಕ್ಕಳು ಯುಗಾದಿಯ ಹಾಡು ಹಾಗೂ ನೃತ್ಯವನ್ನು ಪ್ರಸ್ತುತಪಡಿಸಿದರು.