Kalaburagi, Mar. 27: Ram Navami was celebrated herein Rashtrotthana Vidya Kendra – Kalaburagi. School correspondent Sri Krishna Joshi, who arrived as a guest for the program, spoke and said that the noble man Rama, the one-voiced Rama, Hanuman, a devotee of Rama who went into exile for 14 years as per his vow to his father and became an ideal person for the world, Shabari also waited for the arrival of Rama every day, ate sweet fruits and kept them for him. Finally, the children chanted the slogan of Jai Sri Ram and wished everyone a happy Ram Navami. The children and teachers performed a Rama bhajan in the program. The Pre-KG children dressed up as Rama, Lakshmana, Sita, Hanuman and the monkey army.

ಕಲಬುರಗಿ, ಮಾ. 27: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಕಲಬುರಗಿಯಲ್ಲಿ ರಾಮನವಮಿಯನ್ನು ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಅಭ್ಯಾಗತರಾಗಿ ಆಗಮಿಸಿದ ಶಾಲೆಯ ಕರೆಸ್ಪಾಂಡೆಂಟ್ ಶ್ರೀ ಕೃಷ್ಣ ಜ್ಯೋಶಿ ಅವರು ಮಾತನಾಡುತ್ತಾ ಮರ್ಯಾದ ಪುರುಷೋತ್ತಮ ರಾಮ, ಏಕವಚನಿ ರಾಮ, ತಂದೆಗೆ ಕೊಟ್ಟ ವಚನದಂತೆ 14 ವರ್ಷ ವನವಾಸಕ್ಕೆ ಹೋಗಿ ಜಗತ್ತಿಗೆ ಆದರ್ಶ ವ್ಯಕ್ತಿಯಾದ ರಾಮನ ಭಕ್ತ ಹನುಮ, ಶಬರಿಯೂ ಕೂಡ ರಾಮನ ಬರುವಿಕೆಗಾಗಿ ದಿನಾಲು ಕಾಯುತ್ತಾ ಸಿಹಿಯಾದ ಹಣ್ಣನ್ನು ತಿಂದು ನೋಡಿ ಅವರಿಗೋಸ್ಕರ ಇಡುತ್ತಿದ್ದಳು ಎಂದು ಹೇಳಿ ಕೊನೆಗೆ ಜೈ ಶ್ರೀರಾಮ್ ಎಂದು ಜೈಕಾರದ ಘೋಷಣೆಯನ್ನು ಮಕ್ಕಳಿಂದ ಹೇಳಿಸಿ ಎಲ್ಲರಿಗೂ ರಾಮನವಮಿಯ ಶುಭಾಶಯಗಳನ್ನು ಕೋರಿದರು. ಕಾರ್ಯಕ್ರಮದಲ್ಲಿ ಮಕ್ಕಳು ಹಾಗೂ ಶಿಕ್ಷಕರು ರಾಮನ ಭಜನೆಯನ್ನು ಮಾಡಿದರು. ಪ್ರೀ ಕೆ ಜಿ ಮಕ್ಕಳು ರಾಮ, ಲಕ್ಷ್ಮಣ , ಸೀತೆ ಹಾಗೂ ಹನುಮ ಮತ್ತು ವಾನರ ಸೇನೆಯ ಛದ್ಮವೇಷವನ್ನು ಹಾಕಿದ್ದರು.