Kalaburgi, May 30: A demonstration program was organised by the Fire Department at Rashtrotthana Vidya Kendra – Kalaburgi, Sharana Sirasagi, with the aim of creating awareness about fire accidents.
• Fire Department officers Praveen and staff participated and gave important information about fire safety to the students and teachers.
• At the beginning of the program, the main causes of fire accidents were explained.
• Then the precautionary measures to be taken in case of fire, how to move safely in an emergency and how to use fire extinguishers were demonstrated practically.
• The fire department personnel showed various methods of extinguishing fires and explained the correct use of fire extinguishers.
• The students were told about the need to act bravely and cautiously in emergencies.

ಕಲಬುರ್ಗಿ, ಮೇ 30: ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ – ಕಲಬುರ್ಗಿ, ಶರಣಸಿರಸಗಿಯಲ್ಲಿ ಅಗ್ನಿಶಾಮಕ ದಳದ ವತಿಯಿಂದ ಅಗ್ನಿ ಅವಘಡಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
• ಅಗ್ನಿಶಾಮಕ ದಳದ ಅಧಿಕಾರಿಗಳಾದ ಪ್ರವೀಣ ಹಾಗೂ ಸಿಬ್ಬಂದಿಗಳು ಭಾಗವಹಿಸಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಅಗ್ನಿ ಸುರಕ್ಷತೆ ಕುರಿತು ಮಹತ್ವದ ಮಾಹಿತಿಯನ್ನು ನೀಡಿದರು.
• ಕಾರ್ಯಕ್ರಮದ ಆರಂಭದಲ್ಲಿ ಅಗ್ನಿ ಅನಾಹುತಗಳು ಸಂಭವಿಸುವ ಪ್ರಮುಖ ಕಾರಣಗಳನ್ನು ವಿವರಿಸಲಾಯಿತು.
• ನಂತರ ಬೆಂಕಿ ಕಾಣಿಸಿಕೊಂಡಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು, ತುರ್ತು ಪರಿಸ್ಥಿತಿಯಲ್ಲಿ ಹೇಗೆ ಸುರಕ್ಷಿತವಾಗಿ ಸ್ಥಳಾಂತರಗೊಳ್ಳಬೇಕು ಹಾಗೂ ಅಗ್ನಿಶಾಮಕ ಸಾಧನಗಳನ್ನು ಹೇಗೆ ಬಳಸಬೇಕು ಎಂಬುದನ್ನು ಪ್ರಾಯೋಗಿಕವಾಗಿ ಪ್ರದರ್ಶಿಸಲಾಯಿತು.
• ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿಯನ್ನು ನಂದಿಸುವ ವಿವಿಧ ವಿಧಾನಗಳನ್ನು ತೋರಿಸಿ, ಅಗ್ನಿಶಾಮಕ ಸಿಲಿಂಡರ್‌ಗಳ ಸರಿಯಾದ ಬಳಕೆಯ ಬಗ್ಗೆ ವಿವರಿಸಿದರು.
• ವಿದ್ಯಾರ್ಥಿಗಳಿಗೆ ತುರ್ತು ಸಂದರ್ಭಗಳಲ್ಲಿ ಧೈರ್ಯದಿಂದ ಮತ್ತು ಜಾಗರೂಕತೆಯಿಂದ ವರ್ತಿಸುವ ಅಗತ್ಯವನ್ನು ತಿಳಿಸಿದರು.