Kalaburgi, June 29: The oath-taking ceremony of the members of the school parliament was held at Rashtrotthana Vidya Kendra – Sharana Sirasagi. Former Sergeant of the Indian Air Force, Sri Tippaiah Patti, graced the program.
• The Chief Guest, who distributed badges to the children and spoke, said that only through cultured education can a self-respecting life be built. He expressed the hope that schools should become centres for teaching discipline and responsibility towards society. He said that the role of the school and the teachers is very important in this regard.
• School Correspondent Sri Krishna Joshi spoke and said that only when the children understand that the responsibility they have received is a responsibility to help others can they become good leaders. He said that the school environment should be clean and plastic-free, and discipline should be maintained.
• Principal Sri Lal Deep Srinivasan administered the oath to the children.

ಕಲಬುರ್ಗಿ, ಜೂ. 29: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಶರಣ ಶಿರಸಿಗಿಯಲ್ಲಿ ಶಾಲಾ ಸಂಸತ್ತಿನ ಸದಸ್ಯರ ಪದಗ್ರಹಣ ಸಮಾರಂಭವು ನೆರವೇರಿತು. ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಭಾರತ ವಾಯುಸೇನೆಯ ಮಾಜಿ ಸಾರ್ಜೆಂಟ್ ಶ್ರೀ ತಿಪ್ಪಯ್ಯ ಪಟ್ಟಿ ಅವರು ಆಗಮಿಸಿದ್ದರು.
• ಮಕ್ಕಳಿಗೆ ಬ್ಯಾಡ್ಜ್-ಗಳನ್ನು ವಿತರಿಸಿ, ಮಾತನಾಡಿದ ಮುಖ್ಯ ಅತಿಥಿಗಳು ಸಂಸ್ಕಾರಯುತ ಶಿಕ್ಷಣದಿಂದ ಮಾತ್ರ ಸ್ವಾಭಿಮಾನಿ ಬದುಕನ್ನು ಕಟ್ಟಲು ಸಾಧ್ಯ. ಶಾಲೆಗಳು ಶಿಸ್ತನ್ನು ಕಲಿಸುವ ಹಾಗೂ ಸಮಾಜದ ಬಗ್ಗೆ ಹೊಣೆಗಾರಿಕೆಗಳನ್ನು ಕಲಿಸುವ ಕೇಂದ್ರಗಳಾಗಬೇಕು ಎಂದು ಆಶಯವನ್ನು ವ್ಯಕ್ತಪಡಿಸಿದರು. ಈ ನಿಟ್ಟಿನಲ್ಲಿ ಶಾಲೆ ಹಾಗೂ ಅಧ್ಯಾಪಕರ ಪಾತ್ರ ಅತಿಮುಖ್ಯವಾದದ್ದು ಎಂದು ತಿಳಿಸಿದರು.
• ಶಾಲೆ ಬಾತ್ಮೀದಾರರಾದ ಶ್ರೀ ಕೃಷ್ಣ ಜೋಶಿಯವರು ಮಾತನಾಡಿ ಮಕ್ಕಳು ಪಡೆದಿರುವ ಜವಾಬ್ದಾರಿ ಒಂದು ಹೊಣೆಗಾರಿಕೆ ಅದು ಪರರಿಗೆ ಸಹಾಯ ಮಾಡಲು ಎಂದು ತಿಳಿದಾಗ ಮಾತ್ರ ಅವರೊಬ್ಬ ಉತ್ತಮ ನಾಯಕನಾಗಲು ಸಾಧ್ಯ ಎಂದು ತಿಳಿಸಿದರು. ಶಾಲೆಯ ವಾತಾವರಣದಲ್ಲಿ ಸ್ವಚ್ಛತೆ ಹಾಗೂ ಪ್ಲಾಸ್ಟಿಕ್ ಮುಕ್ತ ಪರಿಸರ ಮಾಡುವುದರ ಜೊತೆಗೆ ಶಿಸ್ತನ್ನು ನಿರ್ವಹಿಸಬೇಕು ಎಂದು ಮಾತನಾಡಿದರು.
• ಪ್ರಧಾನಾಚಾರ್ಯರಾದ ಶ್ರೀ ಲಾಲ್ ದೀಪ್ ಶ್ರೀನಿವಾಸನ್ ಅವರು ಮಕ್ಕಳಿಗೆ ಪ್ರಮಾಣವಚನ ಬೋಧಿಸಿದರು.