Kalaburagi, July 4: The inauguration program of Mathrubharathi was held at Rashtrotthana Vidya Kendra – Kalaburagi. Dr. Rajeshwari Murthy graced the program. Speaking at the program, Dr. Rajeshwari Murthy talked about what food should be consumed in today’s mechanical age, what women should eat since they are mostly low in calcium and protein, what they should eat, what is the main reason is for the increase in BP, sugar, and cancer in today’s people, and what food should be consumed, why people suffer from mental stress. School correspondent Sri Krishna Joshi explained the purpose of forming the Mathrubharathi Committee and what kind of social work can be done through it.

ಕಲಬುರಗಿ, ಜು. 4: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಕಲಬುರಗಿಯಲ್ಲಿ ಮಾತೃಭಾರತಿ ಉದ್ಘಾಟನ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಗಳಾಗಿ ಡಾ. ರಾಜೇಶ್ವರಿ ಮೂರ್ತಿ ಅವರು ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ಡಾಕ್ಟರ್ ರಾಜೇಶ್ವರಿ ಮೂರ್ತಿ ಇಂದಿನ ಯಾಂತ್ರಿಕ ಯುಗದಲ್ಲಿ ಯಾವ ಆಹಾರವನ್ನು ಸೇವಿಸಬೇಕು ಮಹಿಳೆಯರಲ್ಲಿ ಹೆಚ್ಚಾಗಿ ಕ್ಯಾಲ್ಸಿಯಂ ಮತ್ತು ಪ್ರೋಟೀನ್ ಕಡಿಮೆ ಇರುವದರಿಂದ ಅವರು ಏನೆಲ್ಲಾ ಸೇವಿಸಬೇಕು ಇಂದಿನ ಜನರಲ್ಲಿ ಹೆಚ್ಚಾಗಿ ಕಾಣುತ್ತಿರುವುದು ಬಿಪಿ, ಶುಗರ್, ಕ್ಯಾನ್ಸರ್ ಇವುಗಳು ಹೆಚ್ಚಾಗಲು ಕಾರಣ ಮುಖ್ಯವಾಗಿ ಯಾವ ಆಹಾರ ಸೇವನೆ ಮಾಡಬೇಕು, ಜನರು ಮಾನಸಿಕ ಒತ್ತಡದಿಂದ ಏಕೆ ಬಳಲುತ್ತಾರೆ ಎನ್ನುವ ವಿಚಾರಗಳನ್ನು ತಿಳಿಸಿಕೊಟ್ಟರು. ಶಾಲೆಯ ಕರೆಸ್ಪಾಂಡೆಂಟ್ ಶ್ರೀ ಕೃಷ್ಣ ಜೋಶಿ ಅವರು ಮಾತೃಭಾರತಿ ಸಮಿತಿ ರಚಿಸಿದ ಉದ್ದೇಶ, ಇದರಿಂದ ಸಮಾಜಮುಖಿಯ ಕೆಲಸ ಏನೆಲ್ಲಾ ಮಾಡಬಹುದು ಎಂಬುದನ್ನು ತಿಳಿಸಿದರು.