Kalaburagi, July 25: Kargil Victory Day was celebrated at Rashtrotthana Vidya Kendra – Kalaburagi, Sharana Shirasagi.
- Social Studies Teacher Kavya D. spoke and said that the soldiers sacrificed their lives for the country. Despite the harsh winter, food shortage and other adverse conditions in Kargil, they fought without fear of losing their lives. They sacrificed their lives for the country first. They called on our children and youth today to tell the story of Kargil and make them aware of the sacrifice of patriotism.
ಕಲಬುರಗಿ, ಜು. 25: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಕಲಬುರಗಿ, ಶರಣ ಶಿರಸಗಿಯಲ್ಲಿ ಕಾರ್ಗಿಲ್ ವಿಜಯೋತ್ಸವ ದಿನವನ್ನು ಆಚರಿಸಲಾಯಿತು.
- ಸಮಾಜ ಶಿಕ್ಷಕಿ ಕಾವ್ಯ.ಡಿ ಮಾತನಾಡುತ್ತಾ ಯೋಧರು ದೇಶಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದರು. ಕಾರ್ಗಿಲನಲ್ಲಿ ಕೊರೆಯುವಚಳಿ ಆಹಾರದ ಕೊರತೆ ಇನ್ನೂ ಮುಂತಾದ ಪ್ರತಿಕೂಲ ಪರಿಸ್ಥಿತಿ ಇದ್ದರೂ ಕೂಡ ತಮ್ಮ ಪ್ರಾಣದ ಹಂಗನ್ನು ತೊರೆದು ಹೋರಾಡಿದರು. ದೇಶ ಮೊದಲು ಎಂದು ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದರು. ಇಂದಿನ ಮಕ್ಕಳಿಗೂ ಹಾಗೂ ಯುವಕರಿಗೆ ಕಾರ್ಗಿಲ್ ನ ಕಥೆಯನ್ನು ಹೇಳಬೇಕು ಅವರಲ್ಲಿ ದೇಶಭಕ್ತಿ ತ್ಯಾಗದ ಬಗ್ಗೆ ಅರಿವು ಮೂಡಿಸಬೇಕು ಎಂದು ಕರೆ ಕೊಟ್ಟರು.

