Kalaburgi, Aug. 15: 80th Independence Day was celebrated at Rashtrotthana Vidya Kendra – Sharana Sirasagi Dr. Jagannath Bijapur, Senior General Physician and Consultant, Kalaburgi, who hoisted the flag and spoke as the chief guest, told how India got independence by overcoming the tyranny of the British. He spoke about the importance of a developed India, parents, and teachers. Sri Krishna Joshi, who presided over the program, spoke and remembered the great men who fought for freedom. Only through education can a self-respecting life be built. He said that India is not a country of cowards, but a country of heroes. He said that India should be the strongest country in the world; let it be developed, let Bharatambe Jagdabe. In the program, children presented programs such as dance, art and culture, karate, yoga, and speech.
ಕಲಬುರ್ಗಿ, ಆ. 15: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – 80ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಧ್ವಜಾರೋಹಣ ನೆರವೇರಿಸಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಡಾಕ್ಟರ್ ಜಗನ್ನಾಥ ಬಿಜಾಪುರ ಸೀನಿಯರ್ ಜನರಲ್ ಫಿಜಿಷನ್ ಹಾಗೂ ಕನ್ಸಲ್ಟೆಂಟ್ ಕಲಬುರಗಿ, ಅವರು ಬ್ರಿಟಿಷರ ದೌರ್ಜನ್ಯ ದಬ್ಬಾಳಿಕೆಯನ್ನು ಮೆಟ್ಟಿ ಭಾರತಕ್ಕೆ ಸ್ವಾತಂತ್ರ್ಯ ದೊರೆತ ಬಗೆಯನ್ನು ತಿಳಿಸಿದರು. ವಿಕಸಿತ ಭಾರತ, ಅಪ್ಪ ಅಮ್ಮ , ಗುರುಗಳ ಪ್ರಾಮುಖ್ಯತೆಯ ಬಗ್ಗೆ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿದ್ದ ಶ್ರೀ ಕೃಷ್ಣ ಜೋಶಿ ಅವರು ಮಾತನಾಡಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರನ್ನು ಸ್ಮರಿಸಿದರು. ಶಿಕ್ಷಣದಿಂದ ಮಾತ್ರ ಸ್ವಾಭಿಮಾನಿ ಬದುಕನ್ನು ಕಟ್ಟಲು ಸಾಧ್ಯ. ಭಾರತ ಹೇಡಿಗಳ ದೇಶವಲ್ಲ, ಶೂರರ ದೇಶ ತಿಳಿಸಿದರು. ಜಗತ್ತಿನಲ್ಲಿ ಬಲಿಷ್ಠ ರಾಷ್ಟ್ರ ಭಾರತವಾಗಲಿ, ವಿಕಾಸವಾಗಲಿ, ಭಾರತಾಂಬೆ ಜಗದoಬೆ ಆಗಲಿ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮಕ್ಕಳು ನೃತ್ಯ, ಕಲಾ ಹಾಗೂ ಸಾಂಸ್ಕೃತಿಕ, ಕರಾಟೆ, ಯೋಗ, ಭಾಷಣ ಮುಂತಾದ ಕಾರ್ಯಕ್ರಮಗಳನ್ನು ನೀಡಿದರು.





