Kalaburagi, Sep. 4: Sri Krishna Janmashtami was celebrated at Rashtrotthana Vidya Kendra – Sharan Shirasagi.
- Pandit Gopalacharya Akamanchi, who was present at the program, spoke to the children and said that Lord Sri Krishna incarnated to suppress evil, protect the righteous and re-establish religion. He said that from time to time, when religion reached a stage of decline, many great souls took birth and re-established it. He attracted the attention of the children with the stories of Sri Krishna’s childhood pastimes.
- All the children said “Krishnaarpan Mastu”.
- All the teachers weighed Krishna in the cradle.
- Gokulam children came dressed in the costumes of Sri Krishna, Radhe, Yashoda, and Gopi and others.
- The children gave group dance, song and art performances.
- Lord Krishna’s favourite food, butter, sugar, and avalakki were distributed to all the children as prasadam.
- Prizes were distributed to the winners of the state-level karate championship competition.
ಕಲಬುರಗಿ, ಸೆ. 4: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಶರಣ ಶಿರಸಗಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಯಿತು.
- ಕಾರ್ಯಕ್ರಮಕ್ಕೆ ಅಭ್ಯಾಗತರಾಗಿ ಪಂಡಿತರಾದ ಗೋಪಾಲಾಚಾರ್ಯ ಅಕಮಂಚಿ ಆಗಮಿಸಿ ಮಕ್ಕಳನ್ನುದ್ದೇಶಿ ಮಾತನಾಡುತ್ತ ದುಷ್ಟರ ನಿಗ್ರಹಕ್ಕಾಗಿ ಶಿಷ್ಟರ ರಕ್ಷಣೆಗಾಗಿ ಭಗವಾನ್ ಶ್ರೀ ಕೃಷ್ಣನು ಅವತರಿಸಿ ಧರ್ಮವನ್ನು ಮತ್ತೆ ಸಂಸ್ಥಾಪನೆ ಮಾಡಿದನು. ಕಾಲಕಾಲಕ್ಕೆ ಧರ್ಮವು ಅವನತಿ ಹಂತಕ್ಕೆ ತಲುಪಿದಾಗ ಹಲವಾರು ಶ್ರೇಷ್ಠ ಮಹಾತ್ಮರು ಜನ್ಮ ತಾಳಿ ಪುನರ್ ಸ್ಥಾಪನೆ ಮಾಡಿದ್ದಾರೆ ಎಂದರು. ಶ್ರೀ ಕೃಷ್ಣನ ಬಾಲ ಲೀಲೆ ಕಥೆಗಳಿಂದ ಮಕ್ಕಳ ಗಮನ ಸೆಳೆದರು.
- ಮಕ್ಕಳಿಗೆಲ್ಲರೂ ” ಕೃಷ್ಣಾರ್ಪಣಮಸ್ತು” ಎಂದು ಹೇಳಿದರು.
- ಎಲ್ಲ ಶಿಕ್ಷಕಿಯರು ಕೃಷ್ಣನನ್ನು ತೊಟ್ಟಿಲಿಗೆ ಹಾಕಿ ತೂಗಿದರು .
- ಗೋಕುಲಮ್ ಮಕ್ಕಳು ಶ್ರೀಕೃಷ್ಣ, ರಾಧೇ, ಯಶೋಧ, ಹಾಗೂ ಗೋಪಿ ಇನ್ನೂ ಮುಂತಾದ ಛದ್ಮವೇಷಗಳನ್ನು ಧರಿಸಿ ಬಂದಿದ್ದರು.
- ಮಕ್ಕಳು ಸಾಮೂಹಿಕ ನೃತ್ಯ, ಹಾಡು ಹಾಗೂ ಕಲಾ ಪ್ರದರ್ಶನಗಳನ್ನು ನೀಡಿದರು.
- ಶ್ರೀಕೃಷ್ಣನ ನೆಚ್ಚಿನ ತಿನಿಸಾದ ಬೆಣ್ಣೆ ಸಕ್ಕರೆಯನ್ನು, ಹಾಗೂ ಅವಲಕ್ಕಿ ಎಲ್ಲ ಮಕ್ಕಳಿಗೆ ಪ್ರಸಾದ ರೂಪದಲ್ಲಿ ವಿತರಿಸಲಾಯಿತು.
- ರಾಜ್ಯ ಮಟ್ಟದ ಕರಾಟೆ ಚಾಂಪಿಯನ್ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಯಿತು.








