Kalaburagi, Aug. 21: The inauguration program of Matrubharathi was held herein Rashtrotthana Vidya Kendra – Kalaburagi. The program included the appointment of new office bearers and felicitations.Speaking at the program, Sri Krishna Joshi, the school correspondent and the Sangh’s Uttara Prantha Prachara Pramukh, spoke about the work of formulating the RP60 Rashtrotthana Parishat, the Matrubharathi being carried out by the mothers under it, the power of women, what they can achieve in society, the worship of Bharat Mata to awaken devotion towards the country, the importance of mother and motherland, all these things.
ಕಲಬುರಗಿ, ಆ. 21: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಕಲಬುರಗಿಯಲ್ಲಿ ಮಾತೃಭಾರತಿಯ ಉದ್ಘಾಟನಾ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮದಲ್ಲಿ ಹೊಸ ಪದಾಧಿಕಾರಿಗಳ ನೇಮಕ ಮಾಡುವುದರೊಂದಿಗೆ ಸನ್ಮಾನ ಮಾಡಲಾಯಿತು.ಕಾರ್ಯಕ್ರಮದಲ್ಲಿ ಶಾಲೆಯ ಕರೆಸ್ಪಾಂಡೆಂಟ್ ಹಾಗೂ ಸಂಘದ ಉತ್ತರಪ್ರಾಂತ ಪ್ರಚಾರ ಪ್ರಮುಖರಾದ ಶ್ರೀ ಕೃಷ್ಣ ಜೋಶಿಯವರು ಮಾತನಾಡಿ, RP60 ರಾಷ್ಟ್ರೋತ್ಥಾನ ಪರಿಷತ್ ಪ್ರಕಲ್ಪ ಮಾಡುವ ಕೆಲಸ, ಅದರ ಅಡಿಯಲ್ಲಿ ಬರುವ ಮಾತೆಯರಿಂದ ನಡೆಯುವ ಮಾತೃಭಾರತಿ, ಮಹಿಳೆಯರ ಶಕ್ತಿ ಎಷ್ಟಿದೆ, ಸಮಾಜದಲ್ಲಿ ಏನೆಲ್ಲಾ ಸಾಧನೆ ಮಾಡಬಹುದು, ದೇಶದ ಬಗ್ಗೆ ಭಕ್ತಿಭಾವದ ಜಾಗೃತಿಗಾಗಿ ಭಾರತ ಮಾತಾ ಪೂಜನ, ತಾಯಿ ಮತ್ತು ತಾಯಿನಾಡಿನ ಮಹತ್ವ, ಇವೆಲ್ಲವುಗಳ ಕುರಿತು ತಿಳಿಸಿಕೊಟ್ಟರು.