Kalaburagi, Aug. 8: Rakshabandhan program was held herein Rashtrotthana Vidya Kendra – Kalaburagi, Sharana Sirasagi. Sri Sagar Satalkar, who came as a guest to the program, arrived. Talking about the children, he told them that we are all brothers, we are all one, we are all Hindus. “We who wear Rakshabandhan, let us be committed to the protection of the nation,” he expressed his wish. He felt that this program is very necessary to maintain the health of the society and maintain harmony. The children performed dance and drama in the program. The children and the staff tied Rakshabandhan to each other. Later, they visited the government schools of Sharanashirasagi and the children of our school tied Rakhi to all the children and told them about the importance of the festival.
ಕಲಬುರಗಿ, ಆ. 8: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಕಲಬುರಗಿ, ಶರಣಶಿರಸಗಿಯಲ್ಲಿ ರಕ್ಷಾಬಂಧನ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮಕ್ಕೆ ಅಭ್ಯಾಗತರಾಗಿ ಬಂದ ಶ್ರೀ ಸಾಗರ್ ಸತಾಳಕರ್ ಅವರು ಆಗಮಿಸಿದ್ದರು. ಮಕ್ಕಳನ್ನು ಕುರಿತು ಮಾತನಾಡಿ, ನಾವೆಲ್ಲ ಬಂಧು, ನಾವೆಲ್ಲ ಒಂದು, ನಾವೆಲ್ಲ ಹಿಂದೂ ಎಂಬುದನ್ನು ಮಕ್ಕಳಿಂದ ಹೇಳಿಸಿದರು. “ರಕ್ಷೆ ಧರಿಸಿದ ನಾವು ರಾಷ್ಟ್ರ ರಕ್ಷಣೆಗೆ ಕಟಿಬದ್ಧರಾಗೋಣ ” ಎಂದು ಆಶಯವನ್ನು ವ್ಯಕ್ತಪಡಿಸಿದರು. ಸಮಾಜದ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ, ಸಮರಸತೆ ಕಾಪಾಡುವುದಕ್ಕಾಗಿ ಈ ಕಾರ್ಯಕ್ರಮ ಬಹಳ ಅವಶ್ಯಕ ಎಂದು ಅಭಿಪ್ರಾಯ ಪಟ್ಟರು. ಕಾರ್ಯಕ್ರಮದಲ್ಲಿ ಮಕ್ಕಳು ನೃತ್ಯ ಕಲಾ, ನಾಟಕ ಪ್ರದರ್ಶನ ನೀಡಿದರು. ಮಕ್ಕಳು ಹಾಗೂ ಸಿಬ್ಬಂದಿ ವರ್ಗದವರು ಪರಸ್ಪರ ರಕ್ಷೆ ಕಟ್ಟಿದರು. ನಂತರ ಶರಣ ಸಿರಸಗಿಯ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ನಮ್ಮ ಶಾಲೆಯ ಮಕ್ಕಳಿಂದ ಆ ಮಕ್ಕಳಿಗೆಲ್ಲ ರಾಖಿ ಕಟ್ಟಿಸಿ ಹಬ್ಬದ ಮಹತ್ವವನ್ನು ತಿಳಿಸಲಾಯಿತು.