Kalaburagi, Dec. 30: Playwright, actor, director, writer and journalist Addanda Kariappa of Kodagu visited Rashtrotthana Vidya Kendra – Kalaburagi and spoke about the teachers. “India is a great country, why was the Gupta era called the golden age, why was the condition of India ruled by the Mughals before independent India, why was the British ruling even after independence? We all Hindus should build a strong nation and all of you teachers should give good morals to children and build personality, patriotism in children and build a good society,” he said through his words. Sri Krishna Joshi felicitated Addanda Kariappa.
ಕಲಬುರಗಿ, ಡಿ. 30: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಕಲಬುರಗಿಗೆ ನಾಟಕಕಾರ, ನಟ, ನಿರ್ದೇಶಕ, ಬರಹಗಾರ ಮತ್ತು ಪತ್ರಕರ್ತರಾದ ಕೊಡಗಿನ ಅಡ್ಡಂಡ ಕರಿಯಪ್ಪನವರು ಭೇಟಿ ನೀಡಿ ಶಿಕ್ಷಕರನ್ನು ಕುರಿತು ಮಾತನಾಡಿದರು. “ಭಾರತ ಭವ್ಯ ದೇಶ, ಗುಪ್ತರ ಕಾಲವನ್ನು ಸುವರ್ಣ ಯುಗ ಎಂದು ಕರೆದ ಕಾರಣ, ಸ್ವತಂತ್ರ ಭಾರತಕ್ಕಿಂತ ಮುಂಚೆ ಮೊಘಲರು ಆಳಿದ ಭಾರತದ ಸ್ಥಿತಿ, ಸ್ವಾತಂತ್ರ್ಯದ ನಂತರ ಕೂಡಾ ಬ್ರಿಟಿಷರು ತಮ್ಮ ಆಳ್ವಿಕೆ ನಡೆಸುತ್ತಿದ್ದರು ಏಕೆ? ಎಂಬುದನ್ನು ತಿಳಿಸಿ ನಾವೆಲ್ಲರೂ ಹಿಂದೂಗಳು ಸುಭದ್ರ ರಾಷ್ಟ್ರವನ್ನು ಕಟ್ಟಬೇಕು ಹಾಗೂ ಶಿಕ್ಷಕರಾದವರು ನೀವೆಲ್ಲರೂ ಮಕ್ಕಳಿಗೆ ಒಳ್ಳೆಯ ಸಂಸ್ಕಾರವನ್ನು ನೀಡಿ ವ್ಯಕ್ತಿ ನಿರ್ಮಾಣ, ಮಕ್ಕಳಲ್ಲಿ ದೇಶಭಕ್ತಿ, ಒಳ್ಳೆ ಸಮಾಜ ನಿರ್ಮಾಣ ಮಾಡಬೇಕು” ಎಂದು ತಮ್ಮ ನುಡಿಗಳ ಮೂಲಕ ತಿಳಿಸಿದರು. ಶ್ರೀ ಕೃಷ್ಣ ಜೋಶಿ ಅವರು ಅಡ್ಡಂಡ ಕರಿಯಪ್ಪನವರನ್ನು ಸನ್ಮಾನಿಸಿದರು.



