Kalaburagi, Dec. 23: Srinivas Ramanuja Jayanti was celebrated herein Rashtrotthana Vidya Kendra – Kalaburagi. The program was addressed by the school’s Academic Coordinator, Sri Ravikumar.A mathematics week was held in the school for seven days. Children were asked questions and answers were received every day. Several students received prizes in it.The children of class 2 sang a song about mathematics. The children of class 1 and 2 dressed up in disguise and spoke about mathematics.The school’s Principal, Sri Vamshi Krishna, distributed certificates during the program.

ಕಲಬುರಗಿ, ಡಿ. 23: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಕಲಬುರಗಿಯಲ್ಲಿ ಶ್ರೀನಿವಾಸ ರಾಮಾನುಜರ ಜಯಂತಿಯನ್ನು ಆಚರಿಸಲಾಯಿತು. ಕಾರ್ಯಕ್ರಮದ ವಕ್ತಾರರಾದ ಶಾಲೆಯ ಶೈಕ್ಷಣಿಕ ಸಂಯೋಜಕರಾದ ಶ್ರೀ ರವಿಕುಮಾರ್ ಮಾತನಾಡಿದರು.ಶಾಲೆಯಲ್ಲಿ ಏಳು ದಿನಗಳವರೆಗೆ ಗಣಿತ ಸಪ್ತಾಹ ನಡೆದಿತ್ತು. ಮಕ್ಕಳಿಗೆ ಪ್ರತಿದಿನವೂ ಪ್ರಶ್ನೆ ಕೇಳಿ ಉತ್ತರವನ್ನು ಪಡೆಯಲಾಯಿತು. ಅದರಲ್ಲಿ ಹಲವಾರು ವಿದ್ಯಾರ್ಥಿಗಳು ಬಹುಮಾನಗಳನ್ನು ಪಡೆದರು.2ನೇ ತರಗತಿಯ ಮಕ್ಕಳು ಗಣಿತದ ಬಗ್ಗೆ ಹಾಡನ್ನು ಹೇಳಿದರು. 1 ಮತ್ತು 2ನೇ ತರಗತಿಯ ಮಕ್ಕಳು ಛದ್ಮವೇಷವನ್ನು ಹಾಕಿಕೊಂಡು ಗಣಿತದ ಕುರಿತು ಮಾತನಾಡಿದರು.ಕಾರ್ಯಕ್ರಮದಲ್ಲಿ ಶಾಲೆಯ ಪ್ರಧಾನಾಚಾರ್ಯರಾದ ಶ್ರೀ ವಂಶಿ ಕೃಷ್ಣ ಪ್ರಮಾಣ ಪತ್ರಗಳನ್ನು ವಿತರಿಸಿದರು.