Kalaburgi, Aug.15: The 79th Independence Day was celebrated herein Rashtrotthana Vidya Kendra – Kalaburagi, Sharana Sirasagi. Sri Kadaluru Satyanarayanacharya, Retired Principal District and Session Judge, who hoisted the flag and spoke as the Chief Guest, told how India got independence by overcoming the tyranny of the British. “Protection of rivers, increase agricultural products, the role of youth is very important for the future of the country,” he said. Later, Krishna Joshi, who took over the presidency of the program, spoke and remembered the great men who fought for independence. Only through education can a self-respecting life be built. He told about the path taken by India towards progress. He said that India should become a strong country in the world. In the program, children presented programs such as dance, art and cultural, karate, yoga, lezim, speech, etc.

ಕಲಬುರ್ಗಿ, ಆ. 15: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಕಲಬುರಗಿ, ಶರಣ ಶಿರಸಿಗಿಯಲ್ಲಿ 79ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಧ್ವಜಾರೋಹಣ ನೆರವೇರಿಸಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಶ್ರೀ ಕಾಡಲೂರು ಸತ್ಯನಾರಾಯನಾಚಾರ್ಯ, ನಿವೃತ್ತ ಪ್ರಾಂಶುಪಾಲರು, ಜಿಲ್ಲಾ ಮತ್ತು ಸೆಷನ್ ನ್ಯಾಯಾದೀಶರು, ಬ್ರಿಟಿಷರ ದೌರ್ಜನ್ಯ ದಬ್ಬಾಳಿಕೆಯನ್ನು ಮೆಟ್ಟಿ ಭಾರತಕ್ಕೆ ಸ್ವಾತಂತ್ರ್ಯ ದೊರೆತ ಬಗೆಯನ್ನು ತಿಳಿಸಿದರು. “ನದಿಗಳ ರಕ್ಷಣೆ , ಕೃಷಿ ಉತ್ಪನ್ನಗಳನ್ನು ಹೆಚ್ಚಿಸಬೇಕು, ದೇಶದ ಭವಿಷ್ಯಕ್ಕಾಗಿ ಯುವಕರ ಪಾತ್ರ ತುಂಬಾ ಅಗತ್ಯ” ಎಂದು ನುಡಿದರು. ನಂತರ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿದ ಕೃಷ್ಣ ಜೋಶಿ ಅವರು ಮಾತನಾಡಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರನ್ನು ಸ್ಮರಿಸಿದರು. ಶಿಕ್ಷಣದಿಂದ ಮಾತ್ರ ಸ್ವಾಭಿಮಾನಿ ಬದುಕನ್ನು ಕಟ್ಟಲು ಸಾಧ್ಯ. ಭಾರತ ದೇಶ ಪ್ರಗತಿಯೆಡೆಗೆ ನಡೆದು ಬಂದ ದಾರಿಯನ್ನು ತಿಳಿಸಿದರು. ಜಗತ್ತಿನಲ್ಲಿ ಬಲಿಷ್ಠ ರಾಷ್ಟ್ರ ಭಾರತವಾಗಲಿ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮಕ್ಕಳು ನೃತ್ಯ, ಕಲಾ ಹಾಗೂ ಸಾಂಸ್ಕೃತಿಕ , ಕರಾಟೆ, ಯೋಗ , ಲೆಜಿಮ್, ಭಾಷಣ ಮುಂತಾದ ಕಾರ್ಯಕ್ರಮಗಳನ್ನು ನೀಡಿದರು.