Kalaburagi, Feb. 7: The Third year Annual Day celebration of the Rashtrotthana Vidya Kendra – Kalaburagi took place under the theme ‘RSS 100’. H. K. E. Society President Sri Shashiel Namoshi graced the program. Speaking, the chief guest said that the survival of our society, the bright future of our children lies in the culture and education we give them. They said that time and knowledge are more effective than the facilities we give to the development of children. Vidya Bharati State President Sri Parameshwar Hegde, who gave the keynote speech at the program, said that we should give our children the dream of nation building.The correspondent Sri Krishna Joshi of the Rashtrotthana Vidya Kendra provided details regarding RP@60 and emphasized the critical need for the eradication of plastic in the environment. Cloth hand bags were distributed. In the ‘RSS 100’ theme-based program, children presented several cultural performances based on the life and journey of RSS founder, Dr. Hedgewar – from his birth and upbringing to the founding of the Sangh. The performances also highlighted the challenges he faced, the significant contributions of Guruji, and the Sangh’s proactive role in supporting the nation during times of crisis. Furthermore, the event showcased the achievements of the organization and its ongoing initiatives for the future.
ಕಲಬುರಗಿ, ಫೆ. 7: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಕಲಬುರಗಿಯಲ್ಲಿ ಮೂರನೇ ವರ್ಷದ ಶಾಲಾ ವಾರ್ಷಿಕೋತ್ಸವವು ʼಆರ್. ಎಸ್. ಎಸ್ 100ʼ ವಿಷಯದಡಿಯಲ್ಲಿ ಜರಗಿತು.ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಎಚ್. ಕೆ .ಇ . ಸೊಸೈಟಿ ಅಧ್ಯಕ್ಷರಾದ ಶ್ರೀ ಶಶೀಲ್ ನಮೋಶಿ ಅವರು ಆಗಮಿಸಿದ್ದರು. ಮುಖ್ಯ ಅತಿಥಿಗಳು ಮಾತನಾಡುತ್ತ, ನಮ್ಮ ಸಮಾಜದ ಉಳಿವು, ನಮ್ಮ ಮಕ್ಕಳ ಉಜ್ವಲ ಭವಿಷ್ಯ ನಾವು ಅವರಿಗೆ ನೀಡುವ ಸಂಸ್ಕಾರ ಹಾಗೂ ಶಿಕ್ಷಣದಲ್ಲಿ ಇದೆ. ಮಕ್ಕಳ ಬೆಳವಣಿಗೆಗೆ ನಾವು ಕೊಡುವ ಸೌಲಭ್ಯಕ್ಕಿಂತ ಸಮಯ ಹಾಗೂ ತಿಳುವಳಿಕೆಯೂ ಹೆಚ್ಚು ಪರಿಣಾಮಕಾರಿ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ದಿಕ್ಸೂಚಿ ಮಾತುಗಳನ್ನಾಡಿದ ವಿದ್ಯಾಭಾರತಿಯ ರಾಜ್ಯ ಅಧ್ಯಕ್ಷರಾದ ಶ್ರೀ ಪರಮೇಶ್ವರ್ ಹೆಗಡೆ ಅವರು ನಮ್ಮ ಮಕ್ಕಳಿಗೆ ರಾಷ್ಟ್ರ ಕಟ್ಟುವ ಕನಸನ್ನು ನಾವು ಕೊಡಬೇಕು ಎಂದರು. ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಕರೆಸ್ಪಾಂಡೆಂಟ್ ಶ್ರೀ ಕೃಷ್ಣ ಜೋಶಿಯವರು RP@60 ಬಗ್ಗೆ ವಿವರಿಸಿದರು ಹಾಗೂ ಪರಿಸರದಲ್ಲಿ ಪ್ಲಾಸ್ಟಿಕ್ ನಿರ್ಮೂಲನೆ ತುಂಬ ಅಗತ್ಯವಾಗಿದೆ ಎಂದರು. ಹೊಲಿದ ಬಟ್ಟೆಯ ಕೈ ಚೀಲಗಳನ್ನು ವಿತರಣೆ ಮಾಡಲಾಯಿತು. ಮಕ್ಕಳು ʼಆರ್. ಎಸ್. ಎಸ್ 100ʼ ಧ್ಯೇಯ ಆಧಾರಿತ ಕಾರ್ಯಕ್ರಮದಲ್ಲಿ ನಮ್ಮ ಸಂಘದ ಸಂಸ್ಥಾಪಕರು, ಹೆಡಗೆವಾರ್ ಇವರ ಜನನ ಅವರು ಬೆಳೆದ ಬಂದ ದಾರಿ ಸಂಘ ಪ್ರಾರಂಭಿಸಿದ್ದು, ಇವರು ಎದುರಿಸಿದ ಸಮಸ್ಯೆಗಳು, ಗುರೂಜಿಯವರು ಮಾಡಿದ ಕಾರ್ಯಗಳು, ದೇಶ ಸಮಸ್ಯೆಯಲ್ಲಿದ್ದಾಗ ಕೈಗೂಡಿಸಿ ಸಂಘ ಮಾಡಿದ ಕಾರ್ಯ, ಸಾಧನೆಗಳು, ಹಾಗೂ ಮುಂದೆಯೂ ನಡೆಯುತ್ತಿರುವ ಕಾರ್ಯಗಳು ಆಧಾರಿತ ಹಲವಾರು ಕಲಾಪ್ರದರ್ಶನಗಳನ್ನು ನೀಡಿದರು.













