First Annual Day celebration, Ramotsava @ RVK – Kalaburagi

Feb 17: First Annual Day celebration, Ramotsava was organised herein Rashtrotthana Vidya Kendra – Kalaburagi. Industrialist, Sri Shriram Pawar, Vice President of Rashtrotthana Parishat, Sri Dwarakanath and many more dignitaries graced the occasion.

ಫೆಬ್ರವರಿ 17: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಕಲಬುರಗಿಯಲ್ಲಿ ಮೊದಲ ವರ್ಷದ ಶಾಲಾ ವಾರ್ಷಿಕೋತ್ಸವವನ್ನು ರಾಮೋತ್ಸವವಾಗಿ ಆಯೋಜಿಸಲಾಯಿತು. ಉದ್ಯಮಿಗಳಾದ ಶ್ರೀ ಶ್ರೀರಾಮ್ ಪವಾರ್, ರಾಷ್ಟ್ರೋತ್ಥಾನ ಪರಿಷತ್‍ನ ಉಪಾಧ್ಯಕ್ಷರಾದ ಶ್ರೀ ದ್ವಾರಕನಾಥ್‍ ಮೊದಲಾದ ಗಣ್ಯರು ಉಪಸ್ಥಿತರಿದ್ದರು.

Sri Shriram Pawar appreciated the efforts of the school in providing quality education and holistic development of the students. He added that the foundation of a great Bharat is possible only through noble citizens. Noble citizens can only be transformed emerged by schools like Rashtrotthana Vidya Kendra.

ಶ್ರೀ ಶ್ರೀರಾಮ್ ಪವಾರ್ ಅವರು ಮಾತನಾಡಿ ಭವ್ಯ ಭಾರತದ ಬುನಾದಿ ಸ್ವರಾಷ್ಟ್ರನಿಷ್ಠ ಪ್ರಜೆಗಳಿಂದಲೇ ಸಾಧ್ಯ. ಅಂತಹ ಪ್ರಜೆಗಳ ನಿರ್ಮಾಣ ರಾಷ್ಟ್ರೋತ್ಥಾನದಂತಹ ಶಾಲೆಗಳಿಂದಲೇ ಸಾಧ್ಯ ಎಂದು ನುಡಿದರು.

Shri. Dwarakanath proposed key note address highlighting the achievements and activities of the organization and added that with the mission of building a healthy and sustainable society, efforts have been made to engage parents and society through Rashtrotthana schools and children. He marked that in the coming days, we are trying to build a model school in all the districts of the state and through them we will carry all the projects made by Rashtrotthana Parishat to reach out the last village of the state.

ದಿಕ್ಸೂಚಿ ಭಾಷಣ ಮಾಡಿದ ಶ್ರೀ ದ್ವಾರಕಾನಾಥ್, ಸ್ವಸ್ಥ-ಸುಸ್ಥಿರ ಸಮಾಜನಿರ್ಮಾಣದ ಧ್ಯೇಯದೊಂದಿಗೆ ರಾಷ್ಟ್ರೋತ್ಥಾನ ಶಾಲೆಗಳ ಮೂಲಕ ಮಕ್ಕಳು, ಅವರ ಮೂಲಕ ಪೋಷಕರು ಹಾಗೂ ಸಮಾಜವನ್ನು ತೊಡಗಿಸಿಕೊಳ್ಳುವ ಪ್ರಯತ್ನ ನಡೆದಿದೆ ಎಂದು ತಿಳಿಸಿದರು. ಬರುವ ದಿನಗಳಲ್ಲಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರದಲ್ಲೂ ಮಾದರಿ ಶಾಲೆಗಳನ್ನು ನಿರ್ಮಿಸಿ, ಅವುಗಳ ಮೂಲಕ ಪರಿಷತ್‍ನ ಹಲವಾರು ಪ್ರಕಲ್ಪಗಳನ್ನು ರಾಜ್ಯದ ಕೊನೆಯ ಗ್ರಾಮಕ್ಕೂ ತಲುಪಿಸುವ ಪ್ರಯತ್ನದಲ್ಲಿ ಇರುವುದಾಗಿ ತಿಳಿಸಿದರು.

Shri Krishna Joshi, the correspondent of the school described the way the school has evolved in the city of Kalaburagi and appreciated the support and guidance of the parents and the proud citizens of Kalaburagi.

ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಯಲ್ಲಿ ಶಾಲೆಯ ಕರೆಸ್ಪಾಂಡೆಂಟ್ ಶ್ರೀ ಕೃಷ್ಣ ಜೋಶಿ ಅವರು ಕಲಬುರಗಿ ನಗರದಲ್ಲಿ ಶಾಲೆ ಬೆಳೆದು ಬಂದ ಹಾದಿಯನ್ನು ನಿರೂಪಿಸುತ್ತಾ ಪಾಲಕರ ಹಾಗೂ ನಗರದ ಪ್ರಜ್ಞಾವಂತ ಜನರ ಬೆಂಬಲ ಹಾಗೂ ಮಾರ್ಗದರ್ಶನವನ್ನು ಶ್ಲಾಘಿಸಿದರು.

Pradhanacharya, Sri Girish V Joshi proposed vote of thanks and academic coordinator Sri Ravikumar J N hosted the program. School managing committee members and office, local body members made their valuable presence in the School’s Rashtrotsava. School students and Matrubharati Mataji s’ presented cultural program based on the theme, ‘Ramotsava’ showcasing the journey of life of Bal Rama through dance drama and music.

ಶಾಲೆಯ ಪ್ರಾಚಾರ್ಯರಾದ ಶ್ರೀ ಗಿರೀಶ್ ಜೋಶಿ ಅವರು ವಂದಿಸಿದರು. ಕಾರ್ಯಕ್ರಮವನ್ನು ಶ್ರೀ ರವಿಕುಮಾರ್ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಸ್ಥಳೀಯ ಆಡಳಿತ ಮಂಡಳಿಯ ಸದಸ್ಯರು ಹಾಗೂ ಶಾಲೆಯ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು. ನಂತರ ಶಾಲಾ ಮಕ್ಕಳು ಸಾಂಸ್ಕೃತಿಕ ಕಲಾಪ್ರದರ್ಶನವನ್ನು ನೀಡಿದರು. ಕಾರ್ಯಕ್ರಮವು ಶ್ರೀ ರಾಮಾಯಣದ ಕಥೆಗಳು ಹಾಗೂ ನೃತ್ಯಗಳನ್ನು ಒಳಗೊಂಡಿತ್ತು.

Scroll to Top