Kalaburagi, June 22: The 12th International Day of Yoga was celebrated at Rashtrotthana Vidya Kendra – Kalaburagi. Smt. Savita Yaragola of Vandana Yoga, Spiritual Centre, attended the program as the Chief Guest. The Chief Guest spoke about ageing, but the body should not age. Yoga has a positive effect on both the body and the mind. Yoga is the greatest gift of Indian sages to the world. The world today is accepting and following the practice of yoga. So, we all should do yoga daily to become physically and mentally fit. He said that one can lead a healthy life through that.
• Many yoga postures were performed by school children.
• Children and teachers did yoga together with yoga teachers Sri Manjunatha Math and Sri Nagaraja Dargi.
• The Pledge of Yoga was taught by Pradhanacharya Sri Laladeep Srinivasan.

ಕಲಬುರಗಿ, ಜೂ. 22: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಕಲಬುರಗಿಯಲ್ಲಿ 12ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ವಂದನಾ ಯೋಗ, ಆಧ್ಯಾತ್ಮಿಕ ಕೇಂದ್ರದ ಶ್ರೀಮತಿ ಸವಿತಾ ಯರಗೋಳರವರು ಆಗಮಿಸಿದ್ದರು. ಮುಖ್ಯ ಅತಿಥಿಗಳು ಮಾತನಾಡಿ ವಯಸ್ಸಾದರೂ ದೇಹಕ್ಕೆ ವಯಸ್ಸಾಗಬಾರದು ಯೋಗವು ದೇಹ ಮತ್ತು ಮನಸ್ಸು ಎರಡರ ಮೇಲೂ ಸಕಾರಾತ್ಮಕ ಪರಿಣಾಮ ಬಿರುತ್ತದೆ. ಯೋಗವು ಭಾರತೀಯ ಋಷಿಮುನಿಗಳು ಜಗತ್ತಿದೆ ನೀಡಿದ ಬಹು ದೊಡ್ಡ ಕೊಡುಗೆಯಾಗಿದೆ. ಜಗತ್ತು ಈವತ್ತು ಯೋಗ ಪದ್ದತಿಯನ್ನು ಒಪ್ಪಿಕೊಂಡು ಅನುಸರಿಸುತ್ತಿದೆ. ಹಾಗಾಗಿ ನಾವೆಲ್ಲರೂ ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢವಾಗಲು ಪ್ರತಿದಿನವೂ ಯೋಗವನ್ನು ಮಾಡಬೇಕು. ಆ ಮೂಲಕ ಆರೋಗ್ಯವಾದ ಜೀವನ ನಡೆಸಬಹುದಾಗಿದೆ ಎಂದು ಹೇಳಿದರು.
• ಶಾಲೆ ಮಕ್ಕಳಿಂದ ಯೋಗದ ಹಲವು ಭಂಗಿಗಳನ್ನು ಪ್ರದರ್ಶನ ಮಾಡಲಾಯಿತು.
• ಯೋಗ ಶಿಕ್ಷಕರಾದ ಶ್ರೀ ಮಂಜುನಾಥ ಮಠ ಮತ್ತು ಶ್ರೀ ನಾಗರಾಜ ದರ್ಗಿ ಇವರೊಂದಿಗೆ ಮಕ್ಕಳು, ಶಿಕ್ಷಕರು ಸೇರಿ ಯೋಗ ಮಾಡಿದರು.
• ಯೋಗದ ಪ್ರತಿಜ್ಞೆಯನ್ನು ಪ್ರಧಾನಾಚಾರ್ಯರಾದ ಶ್ರೀ ಲಾಲದೀಪ್ ಶ್ರೀನಿವಾಸನ್ ಹೇಳಿಕೊಟ್ಟರು.