Kalaburgi, A. 14: Dr. Babasaheb Ambedkar Jayanti was celebrated herein Rashtrotthana Vidya Kendra – Kalaburgi, Sharana sirasagi. Campus Incharge Bhimaraya Itagondi, who arrived as a guest at the program, said, we should learn from Babasaheb how to achieve by sticking to the ideology we believe in, highlighting the life of the great humanist Dr. Babasaheb Ambedkar. Schools are a miniature of society. Children should be taught the lesson of living in harmony in schools themselves. This should create a feeling that Hindu society is one. Remembering Dr. Babasaheb Ambedkar’s contributions to society, he said that water, temples and crematoriums should be available to everyone equally. There should be no discrimination in this.
ಕಲಬುರ್ಗಿ, ಏ. 14: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಕಲಬುರಗಿ, ಶರಣಸಿರಸಗಿಯಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಅಭ್ಯಾಗತರಾಗಿ ಆಗಮಿಸಿದ ಕ್ಯಾಂಪಸ್ ಇಂಚಾರ್ಜ್ ಭೀಮರಾಯ ಇಟಗೊಂಡಿ ಅವರು ಅವರು ಮಾತನಾಡುತ್ತಾ ಮಹಾ ಮಾನವತಾವಾದಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಜೀವನದ ಚಿತ್ರಣಗಳನ್ನು ಮೇಲಕು ಹಾಕುತ್ತಾ, ನಾವು ನಂಬಿರುವ ಸಿದ್ಧಾಂತಕ್ಕೆ ಕಟಿಬದ್ಧರಾಗಿ ಸಾಧನೆ ಹೇಗೆ ಮಾಡಬೇಕು ಎಂಬ ಛಲವನ್ನು ಬಾಬಾಸಾಹೇಬರಿಂದ ಕಲಿಯಬೇಕು. ಶಾಲೆಗಳು ಸಮಾಜದ ಒಂದು ಕಿರುಚಿತ್ರಣ ಮಕ್ಕಳಿಗೆ ಶಾಲೆಗಳಲ್ಲಿಯೇ ಸಾಮರಸ್ಯದಿಂದ ಬದುಕುವ ಪಾಠವನ್ನು ಕಲಿಸಬೇಕು. ಇದರಿಂದ ಹಿಂದೂಸಮಾಜ ಒಂದು ಎಂಬ ಭಾವವನ್ನು ಮೂಡಿಸಬೇಕು. ಸಮಾಜಕ್ಕೆ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಕೊಡುಗೆಗಳನ್ನು ಸ್ಮರಿಸುತ್ತಾ, ನೀರು, ದೇವಸ್ಥಾನ ಹಾಗೂ ಸ್ಮಶಾನ ಎಲ್ಲರಿಗೂ ಸಮಾನವಾಗಿ ಸಿಗಬೇಕು. ಇದರಲ್ಲಿ ಯಾವ ಬೇಧವೂ ಇರಬಾರದು ಎಂದು ನುಡಿದರು.

