Davangere, Aug. 4: A health awareness program for adolescent girls was organised at Rashtrotthana Vidya Kendra – Davangere

  • Gynaecologist Dr Sharanamma Pattanashetty, who arrived as a resource person, provided information on important topics related to the health of adolescent girls such as cleanliness, prevention of anaemia, HPV vaccination, PCOS (Polycystic Ovary Syndrome), mental health, obesity and other health-related topics.
  • Adolescence is the most important stage of life from childhood to adulthood. Generally, the period between 13 and 19 years is called adolescence. During this time, physical, mental, emotional and social development takes place rapidly. She spoke about the problems of adolescence.
  • This period can be managed healthily through proper awareness of adolescence, cleanliness and nutritious food.

 

ಕಲಬುರಗಿ, ಆ. 4: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಕಲಬುರಗಿಯಲ್ಲಿ ಹದಿಹರೆಯದ ಹುಡುಗಿಯರ ಆರೋಗ್ಯ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. 

  • ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಸ್ತ್ರೀರೋಗ ತಜ್ಞೆ ಡಾ. ಶರಣಮ್ಮ ಪಟ್ಟಣಶೆಟ್ಟಿ ಅವರು ಹದಿಹರೆಯದ ಹುಡುಗಿಯರ ಆರೋಗ್ಯಕ್ಕೆ ಸಂಬಂಧಿಸಿದ ಪ್ರಮುಖ ವಿಷಯಗಳಾದ ಸ್ವಚ್ಛತೆ, ರಕ್ತಹೀನತೆ (ಅನಿಮಿಯಾ) ತಡೆಗಟ್ಟುವಿಕೆ, HPV ಲಸಿಕೆ, PCOS (ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್), ಮಾನಸಿಕ ಆರೋಗ್ಯ, ಸ್ಥೂಲಕಾಯತೆ ಹಾಗೂ ಇತರ ಆರೋಗ್ಯ ಸಂಬಂಧಿತ ವಿಷಯಗಳ ಕುರಿತು ಮಾಹಿತಿ ನೀಡಿದರು. 
  • ತಾರುಣ್ಯ ಎಂದರೆ ಬಾಲ್ಯದಿಂದ ಪ್ರೌಢಾವಸ್ಥೆಗೆ ಸಾಗುವ ಜೀವನದ ಅತ್ಯಂತ ಮಹತ್ವದ ಹಂತ. ಸಾಮಾನ್ಯವಾಗಿ 13 ರಿಂದ 19 ವರ್ಷಗಳ ನಡುವಿನ ಅವಧಿಯನ್ನು ತಾರುಣ್ಯವೆಂದು ಕರೆಯುತ್ತಾರೆ. ಈ ಸಮಯದಲ್ಲಿ ದೈಹಿಕ, ಮಾನಸಿಕ, ಭಾವನಾತ್ಮಕ ಹಾಗೂ ಸಾಮಾಜಿಕ ಬೆಳವಣಿಗೆ ವೇಗವಾಗಿ ನಡೆಯುತ್ತದೆ. ಹದಿಹರೆಯ ವಯಸ್ಸಿನಲ್ಲಿ ಆಗುವ ತಾರುಣ್ಯದ ಸಮಸ್ಯೆಗಳನ್ನು ಕುರಿತು ಮಾತನಾಡಿದರು.
  • ತಾರುಣ್ಯಾವಸ್ಥೆಯ ಸರಿಯಾದ ಅರಿವು, ಸ್ವಚ್ಛತೆ ಮತ್ತು ಪೌಷ್ಟಿಕ ಆಹಾರದ ಮೂಲಕ ಈ ಅವಧಿಯನ್ನು ಆರೋಗ್ಯಕರವಾಗಿ ನಿರ್ವಹಿಸಬಹುದು ಎಂದು ತಿಳಿ ಹೇಳಿದರು.