Kalaburgi, Aug. 18: The Nagar Panchami festival was celebrated at Rashtrotthana Vidya Kendra – Sharanasirasagi.

  • Smt. Sushma Bhosagekar, Rashtra Sevika Samiti Swayamsevika, spoke as the Chief Spokesperson and explained the background of the Nagar Panchami festival, Panchami Tithi, and Paksha. She said that since snakes live in burrows in the earth during the rainy season, it is the duty of all of us to protect the living beings in nature. She told about the custom of throwing snakes, the custom of celebrating Nagar Panchami and the concern for environmental protection behind it.
  • Children performed group songs and dances in the program.


ಕಲಬುರಗಿ, ಆ. 18: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಶರಣಸಿರಸಗಿಯಲ್ಲಿ ನಾಗರ ಪಂಚಮಿ ಉತ್ಸವವನ್ನು ಆಚರಿಸಲಾಯಿತು. 

  • ಶ್ರೀಮತಿ ಸುಷ್ಮಾ ಭೋಸಗೇಕರ್, ರಾಷ್ಟ್ರ ಸೇವಿಕಾ ಸಮಿತಿ ಸ್ವಯಂ ಸೇವಿಕಾ, ಅವರು ಮುಖ್ಯ ವಕ್ತಾರರಾಗಿ ಮಾತನಾಡಿ ನಾಗರ ಪಂಚಮಿ ಉತ್ಸವದ ಹಿನ್ನೆಲೆ, ಪಂಚಮಿ ತಿಥಿ, ಪಕ್ಷ ಇವುಗಳ ಬಗ್ಗೆ ತಿಳಿಸಿ ಮಳೆಗಾಲದಲ್ಲಿ ಹಾವುಗಳು ಭೂಮಿಯ ಬಿಲದಲ್ಲಿ ಹುತ್ತದಲ್ಲಿ ಇರುವದರಿಂದ ಪ್ರಕೃತಿಯಲ್ಲಿರುವ ಜೀವಿಯನ್ನು ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು. ಹುತ್ತಕ್ಕೆ ಹಾಲೆರೆಯುವ ಪದ್ಧತಿ, ನಾಗರ ಪಂಚಮಿ ಆಚರಿಸುತ್ತಿದ್ದಂತಹ ಪದ್ಧತಿ ಹಾಗೂ ಅದರ ಹಿಂದಿನ ಪರಿಸರ ಸಂರಕ್ಷಣೆಯ ಕಾಳಜಿಯ ಬಗ್ಗೆ ತಿಳಿಸಿದರು. 
  • ಕಾರ್ಯಕ್ರಮದಲ್ಲಿ ಮಕ್ಕಳು ಸಮೂಹಗಾನ ಹಾಗೂ ನೃತ್ಯವನ್ನು ಪ್ರದರ್ಶಿಸಿದರು.