Kalaburgi, Aug. 24: Rajguru Jayanti was celebrated at Rashtrotthana Vidya Kendra – Sharanasirasagi. Sharan, a 9th-standard student, spoke about Rajguru and stated that Rajguru was one of the prominent revolutionaries of India’s freedom struggle. He was born on August 24, 1908, in Khed village of Maharashtra’s Pune district. From childhood, he possessed an immense interest in patriotism and freedom. Joining the Hindustan Socialist Republican Association (HSRA), Rajguru took part in revolutionary activities against the British and was a close associate of Bhagat Singh and Sukhdev. The children dressed up as Rajaguru and delivered his message.

 

ಕಲಬುರ್ಗಿ, ಆ. 24: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಶರಣಸಿರಸಗಿಯಲ್ಲಿ ವೀರ ಸ್ವಾತಂತ್ರ್ಯ ಹೋರಾಟಗಾರ, ರಾಜಗುರು ಜಯಂತಿಯನ್ನು ಆಚರಿಸಲಾಯಿತು. 9 ನೆಯ ತರಗತಿಯ ವಿದ್ಯಾರ್ಥಿ ಶರಣ, ರಾಜಗುರು ಕುರಿತು ಮಾತನಾಡಿ, ರಾಜಗುರು ಅವರು ಭಾರತದ ಸ್ವಾತಂತ್ರ್ಯ ಹೋರಾಟದ ಪ್ರಮುಖ ಕ್ರಾಂತಿಕಾರಿಗಳಲ್ಲಿ ಒಬ್ಬರು. ಅವರು 24 ಆಗಸ್ಟ್ 1908ರಂದು ಮಹಾರಾಷ್ಟ್ರದ ಪುಣೆ ಜಿಲ್ಲೆಯ ಖೇಡ್ ಗ್ರಾಮದಲ್ಲಿ ಜನಿಸಿದರು. ಬಾಲ್ಯದಿಂದಲೇ ದೇಶಭಕ್ತಿ ಮತ್ತು ದೇಶದ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದರು. ರಾಜಗುರು ಅವರು ಹಿಂದೂಸ್ತಾನ್ ಸೋಷಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್ (HSRA) ಸಂಘಟನೆಯಲ್ಲಿ ಸೇರಿ ಬ್ರಿಟಿಷರ ವಿರುದ್ಧದ ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ಭಾಗವಹಿಸಿದರು. ಅವರು ಭಗತ್ ಸಿಂಗ್ ಮತ್ತು ಸುಖದೇವ್ ಅವರ ಆಪ್ತ ಸಹಚರರಾಗಿದ್ದರು ತಿಳಿಸಿದನು. ಮಕ್ಕಳು ರಾಜಗುರು ವೇಷವನ್ನು ಧರಿಸಿ ಅವರ ಸಂದೇಶವನ್ನು ಹೇಳಿದರು.