Kalaburgi, Aug. 29: National Sports Day was celebrated at Rashtrotthana Vidya Kendra – Kalaburagi

  • Sri Girish Joshi, Head of Science, RVK – Dharwad, was present as the Chief Guest in the program and shared his valuable thoughts on National Sports Day.

In his speech, he gave the message that students should actively participate in physical activities by playing on the field, “Play on the field, not on mobile”. He said that sports are helpful in the physical and mental development of children.

  • Sri Deepak, the physical education teacher of the school, gave valuable information about the importance of National Sports Day. He explained the importance of hockey, the national sport of India. He said that everyone should be mentally and physically strong. He said that engaging in sports develops adaptability, discipline, self-confidence and a good personality. He also said that Major Dhyan Chand was a famous and legendary hockey player of India.

 

ಕಲಬುರಗಿ, ಆ. 29: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಕಲಬುರಗಿಯಲ್ಲಿ ರಾಷ್ಟ್ರೀಯ ಕ್ರೀಡಾ ದಿನವನ್ನು ಆಚರಿಸಲಾಯಿತು.

  • ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಾವಿಕೆ – ಧಾರವಾಡ ಶಾಲೆಯ ವಿಜ್ಞಾನ ವಿಷಯದ ಮುಖ್ಯಸ್ಥರಾದ ಶ್ರೀ ಗಿರೀಶ್ ಜೋಶಿ ಅವರು ಉಪಸ್ಥಿತರಿದ್ದು, ರಾಷ್ಟ್ರೀಯ ಕ್ರೀಡಾ ದಿನದ ಕುರಿತು ತಮ್ಮ ಅಮೂಲ್ಯ ವಿಚಾರಗಳನ್ನು ಹಂಚಿಕೊಂಡರು.

ತಮ್ಮ ಭಾಷಣದಲ್ಲಿ ಅವರು ವಿದ್ಯಾರ್ಥಿಗಳು ಮೈದಾನದಲ್ಲಿ ಆಟವಾಡುವ ಮೂಲಕ ದೈಹಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು, “ಮೈದಾನದಲ್ಲಿ ಆಟವಾಡಬೇಕು, ಮೊಬೈಲಿನಲ್ಲಿ ಅಲ್ಲ” ಎಂಬ ಸಂದೇಶವನ್ನು ನೀಡಿದರು. ಕ್ರೀಡೆಯು ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದು ತಿಳಿಸಿದರು.

  • ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ದೀಪಕ್ ಅವರು ರಾಷ್ಟ್ರೀಯ ಕ್ರೀಡಾ ದಿನದ ಮಹತ್ವದ ಕುರಿತು ಅಮೂಲ್ಯ ಮಾಹಿತಿಯನ್ನು ನೀಡಿದರು. ಭಾರತದ ರಾಷ್ಟ್ರೀಯ ಕ್ರೀಡೆಯಾದ ಹಾಕಿಯ ಮಹತ್ವವನ್ನು ವಿವರಿಸಿದರು. ಪ್ರತಿಯೊಬ್ಬರೂ ಮಾನಸಿಕವಾಗಿ ಹಾಗೂ ದೈಹಿಕವಾಗಿ ಸದೃಢರಾಗಿರಬೇಕು ಎಂದು ತಿಳಿಸಿದರು. ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಹೊಂದಿಕೊಳ್ಳುವ ಗುಣ, ಶಿಸ್ತು, ಆತ್ಮವಿಶ್ವಾಸ ಮತ್ತು ಉತ್ತಮ ವ್ಯಕ್ತಿತ್ವ ಬೆಳೆಯುತ್ತದೆ ಎಂದು ಹೇಳಿದರು. ಅಲ್ಲದೆ, ಮೇಜರ್ ಧ್ಯಾನ್ ಚಂದ್ ಅವರು ಭಾರತದ ಪ್ರಸಿದ್ಧ ಹಾಗೂ ದಂತಕಥೆಯಂತಿರುವ ಹಾಕಿ ಆಟಗಾರರಾಗಿದ್ದರು ಎಂದು ತಿಳಿಸಿದರು.