Kalaburagi, Sep. 5: Teachers’ Day was celebrated at Rashtrotthana Vidya Kendra – Sharan Sirsagi.

  • Dr. Kashinath, a prominent research professor of chemistry at KCT College, was present as a guest of honour for the program.
  • The Chief Guest addressed the gathering and said, “We remember Dr. Sarvepalli Radhakrishnan for providing valuable education and for handling his role as a teacher effectively for the development of the society. The role of teachers in the progress of the society is significant and the level of a society can be understood by observing the education and teachers there. The future of the country is built within the four walls, he said. In this modern era, the decline of values ​​is constantly happening. He hoped that the teaching community should be committed to its revival, and educational institutions with the thought of nation building should work together in such a task.
  • Books were distributed to all the staff members in the program and they were motivated to study independently.
  • The school teachers Smt. Sunita and Sri Sripada shared their impressions in the program.
  • The music teacher and the team presented a song about the Guru.

 

ಕಲಬುರಗಿ, ಸೆ. 5: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಶರಣ ಶಿರಸಗಿಯಲ್ಲಿ ಶಿಕ್ಷಕರ ದಿನಾಚರಣೆ ಆಚರಿಸಲಾಯಿತು. 

  • ಕಾರ್ಯಕ್ರಮಕ್ಕೆ ಅಭ್ಯಾಗತರಾಗಿ ಕೆ ಸಿ ಟಿ ಕಾಲೇಜಿನಲ್ಲಿ ಪ್ರಮುಖ ಸಂಶೋಧನಾ ರಾಸಾಯನ ಶಾಸ್ತ್ರದ ಪ್ರಾಧ್ಯಾಪ ಕರಾದ ಡಾ.ಕಾಶಿನಾಥ ಆಗಮಿಸಿದ್ದರು.
  • ಮುಖ್ಯ ಅತಿಥಿಗಳು ಸಭೆಯನ್ನುದ್ದೇಶಿಸಿ ಮಾತನಾಡುತ್ತ, “ಮೌಲ್ಯಯುತ ಶಿಕ್ಷಣ ನೀಡಿದ್ದಕ್ಕಾಗಿ ಹಾಗೂ ಸಮಾಜದ ಅಭಿವೃದ್ಧಿಗಾಗಿ ಶಿಕ್ಷಕರಾಗಿ ತಮ್ಮ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಿದ್ದಕ್ಕಾಗಿ ಡಾ. ಸರ್ವಪಳ್ಳಿ ರಾಧಾಕೃಷ್ಣನ್ ಅವರನ್ನು ನೆನೆಸಿಕೊಳ್ಳುತ್ತೇವೆ. ಸಮಾಜದ ಏಳಿಗೆಯಲ್ಲಿ ಶಿಕ್ಷಕರ ಪಾತ್ರ ಗಣನೀಯವಾದದ್ದು ಒಂದು ಸಮಾಜವು ಯಾವ ಮಟ್ಟದಲ್ಲಿರುವುದೆಂಬುದನ್ನು ಅಲ್ಲಿನ ಶಿಕ್ಷಣ ಹಾಗೂ ಶಿಕ್ಷಕರನ್ನು ಗಮನಿಸಿ ಅರಿತುಕೊಳ್ಳಬಹುದು. ನಾಲ್ಕು ಗೋಡೆಗಳ ಮಧ್ಯದಲ್ಲಿ ದೇಶದ ಭವಿಷ್ಯ ನಿರ್ಮಾಣ ಆಗುತ್ತದೆ ಎಂದರು. ಈ ಆಧುನಿಕ ಯುಗದಲ್ಲಿ ಮೌಲ್ಯಗಳ ಕುಸಿತ ನಿರಂತರವಾಗಿ ನಡೆಯುತ್ತಿದೆ. ಅದರ ಪುನರುತ್ಥಾನಕ್ಕೆ ಶಿಕ್ಷಕ ಸಮುದಾಯ ಪ್ರತಿಬದ್ಧರಾಗಬೇಕು, ಇಂತಹ ಕಾರ್ಯದಲ್ಲಿ ರಾಷ್ಟ್ರ ನಿರ್ಮಾಣದ ಚಿಂತನೆ ಇರುವ ಶಿಕ್ಷಣ ಸಂಸ್ಥೆಗಳು ಒಮ್ಮನದಿಂದ ಕಾರ್ಯನಿರ್ವಹಿಸಬೇಕು ಎಂದು ಆಶಿಸಿದರು. 
  • ಕಾರ್ಯಕ್ರಮದಲ್ಲಿ ಎಲ್ಲ ಸಿಬ್ಬಂದಿ ವರ್ಗದವರಿಗೆ ಪುಸ್ತಕಗಳನ್ನು ವಿತರಿಸಿ, ಸ್ವಾಧ್ಯಯಕ್ಕೆ ಪ್ರೇರೇಪಿಸಲಾಯಿತು.
  • ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರಾದ ಶ್ರೀಮತಿ ಸುನೀತಾ, ಶ್ರೀ ಶ್ರೀಪಾದ ಅವರುಗಳು ತಮ್ಮ ಅನಿಸಿಕೆಯನ್ನು ಹಂಚಿಕೊಂಡರು. 
  • ಸಂಗೀತ ಶಿಕ್ಷಕಿ ಮತ್ತು ತಂಡದವರು ಗುರುವನ್ನು ಕುರಿತು ಹಾಡನ್ನು ಪ್ರಸ್ತುತಪಡಿಸಿದರು.